ದ ಕ ಜಿಲ್ಲಾಧಿಕಾರಿ ಗಮನಿಸಲಿ

ನಗರದಲ್ಲಿ ಡೀಸಿ ಆದೇಶದಂತೆ 40ರಿಂದ 50 ಶೇಕಡ ಬೀದಿ ಬದಿ ವ್ಯಾಪಾರಸ್ಥರು ಮೈದಾನದ ಹತ್ತಿರವಿರುವ ವ್ಯಾಪಾರಿ ವಲಯಕ್ಕೆ ಸ್ಥಳಾಂತರಗೊಂಡಿರುತ್ತಾರೆ ಪತ್ರಿಕಾ ವರದಿ ಆದರೆ ಕೇಂದ್ರ ಮಾರುಕಟ್ಟೆ ಬಳಿ ಮೈದಾನ 2ನೇ ಅಡ್ಡರಸ್ತೆ ಮತ್ತು ಜಿಎಸ್ಸೆಸ್ ರಸ್ತೆಯಿಂದ ಮಾರ್ಕೆಟ್ ಸಂಪರ್ಕಿಸುವ ರಸ್ತೆ ನೋಡಿದಾಗ ಆದೇಶದಲ್ಲಿ ಮತ್ತು ಪಾಲನೆಯಲ್ಲಿ ಎಲ್ಲೋ ಎಡವಟ್ಟಾಗಿದೆ ಎಂದೆನಿಸುತ್ತಿದೆ
ಈ ರಸ್ತೆಯಲ್ಲಿ ಹೊಸ ಬೆಳವಣಿಗೆಯೊಂದಾಗಿದೆ ಯಾರೋ ವಾಹನದಲ್ಲೇ ಕುಳಿತು ವ್ಯಾಪಾರ ಮಾಡುವುದಾಗಿದೆ ಇದರಲ್ಲಿ ಫೈನಾನ್ಸ್ ಬಡ್ಡಿ ವ್ಯವಹಾರವೂ ಸೇರಿಕೊಂಡಿದೆ ಕೇಂದ್ರ ಮಾರುಕಟ್ಟೆ ಕೆಲ ವರ್ತಕರೂ ತಮ್ಮ ವ್ಯವಹಾರದ ಸರಕುಗಳನ್ನು ಫುಟ್ಪಾತ್ ಮತ್ತು ರಸ್ತೆಯಲ್ಲೇ ಇಟ್ಟು ರಸ್ತೆಯಲ್ಲಿ ನಡೆಯಲಾಗದಂತಹ ಪರಿಸ್ಥಿತಿ ನಿರ್ಮಿಸಿರುತ್ತಾರೆ ಆ ಕುರಿತು ತಾವೇಕೇ ಸೂಕ್ತ ಕ್ರಮ ಕೈಗೊಂಡಿಲ್ಲ ಇಲ್ಲಿನ ಆಟೋ ಪಾರ್ಕಿನಲ್ಲೊಬ್ಬ ಡ್ರೈವರ್ ರಾಕ್ಷಸನಂತೆ ಹೆಂಗಸರಲ್ಲಿ ಯಾವ ರೀತಿ ವರ್ತಿಸಬೇಕೆಂದೇ ತಿಳಿಯದೇ ಮೈಮೇಲೆ ಭೂತ ಬಂದವರಂತೆ ಮಾತನಾಡುವುದು ಫೋಟೋ ಕ್ಲಿಕ್ಕಿಸುವುದು ಮತ್ತು ಅವಾಚ್ಯವಾಗಿ ನಿಂದಿಸುವುದು ನಡೆದುಕೊಂಡು ಬಂದಿದೆ. ಇದು ನಾನು ಸ್ವತಃ ಅನುಭವಿಸಿದ್ದೇನೆ ಪದೇ ಪದೇ ಕೊಟ್ಟಾರಿ ಎಂಬ ಪೊಲೀಸಪ್ಪನ ಹೆಸರು ಹೇಳಿ ನಮ್ಮನ್ನು ಬೆದರಿಸುತ್ತಾನೆ ಈ ಪೊಲೀಸಪ್ಪನಿಗೂ ಈ ಆಟೋ ಚಾಲಕಗೂ ಏನು ಸಂಬಂಧ ಯಾವ ವ್ಯವಹಾರ ವಿಚಾರಣೆ ನಡೆಸುವಿರಾ

  • ಸುಪ್ರಿಯಾ  ಮಂಗಳೂರು