ಮಕ್ಕಳ ಅಪಹರಣ ವದಂತಿ ಪೊಲೀಸರು ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಲಿ

ದ ಕ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಅಪಹರಿಸುವ ಜಾಲ ಅಲ್ಲಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ. ಕಳೆದೊಂದು ತಿಂಗಳಿನಿಂದ ಅಲ್ಲಲ್ಲಿ ಮಕ್ಕಳ ಅಪಹರಣದ ಬಗ್ಗೆ ವದಂತಿ ಹಬ್ಬುತ್ತಲೇ ಇದೆಯಾದರೂ ಪೊಲೀಸರು ಮಾತ್ರ ಪ್ರಕರಣವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.

ಮೂಡಬಿದ್ರೆ, ಮತ್ತು ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣಗಳಲ್ಲಿ ಮಕ್ಕಳೇ ನಡೆದ ಘಟನೆ ವಿವರಿಸಿದ್ದರೂ, ಅಪಹರಣಕಾರರು ಮಕ್ಕಳನ್ನು ಬೆದರಿಸುವುದು, ಚಾಕಲೇಟ್ ತೋರಿಸಿ ಮಕ್ಕಳ ಅಪಹರಣಕ್ಕೆ  ಯತ್ನಿಸುವುದೆಲ್ಲ ನಡೆಯುತ್ತಲೇ ಇದೆ. ಆದ್ದರಿಂದ ಪೊಲೀಸರು ಇನ್ನು ತಡೆಮಾಡದೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಅಪಹರಣಕಾರರ ಮೂಲವನ್ನು ಪತ್ತೆ ಹಚ್ಚಬೇಕಾಗಿದೆ. ಮಕ್ಳಳ ಅಪಹರಣದ ವದಂತಿನಿಂದ ಮಕ್ಕಳ ಹೆತ್ತವರು ಆತಂಕಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

  • ವೇದಾನಂದ ಕೋಟ್ಯಾನ್, ಯೆಯ್ಯಾಡಿ-ಮಂಗಳೂರು