ತಲಾಖಿಗೆ ಕೇಂದ್ರ ನಿಷೇಧ ಹೇರಲಿ

ಮೂರು ಬಾರಿ ತಲಾಖ್ ಎಂದರೆ ವಿವಾಹದಿಂದ ವಿಚ್ಛೇದನ ಆಯಿತೇ  ಮದುವೆಯಾಗಿ ಮೂರೇ ದಿನದಲ್ಲಿ ತಲಾಖ್ ಎಂದು 3 ಬಾರಿ ಹೇಳಿ ವಿಚ್ಛೇದನ ನೀಡಿ, ಮರುಮದುವೆ ಆಗುವ ಸಂಪ್ರದಾಯ ಮುಸ್ಲಿಂ ಧರ್ಮದಲ್ಲಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಸ್ಲಿಂ ಧಾರ್ಮಿಕ ಕಾನೂನಿನಲ್ಲಿ ಕೋರ್ಟ್ ಎಷ್ಟರಮಟ್ಟಿಗೆ ಮಧ್ಯ ಪ್ರವೇಶಿಸಬಹುದು ಎಂಬುದನ್ನು ಸುಪ್ರೀಂ ಪರಾಮರ್ಶೆ ನಡೆಸುತ್ತಿದೆ. ಮಹಿಳಾ ಹೋರಾಟಗಾರರು ಬಹಳ ಹಿಂದಿನಿಂದಲೂ ಮುಸ್ಲಿಂ ವೈಯಕ್ತಿಕ ಕಾನೂನಿನ ವಿರುದ್ಧ ಧ್ವನಿ ಎತ್ತಿದ್ದಾರೆ. ಬಹುಪತ್ನಿತ್ವ ಏಕಪಕ್ಷೀಯ ವಿಚ್ಛೇದನ ನಿರ್ಧಾರ ಮತ್ತು ಬಾಲ್ಯವಿವಾಹಗಳಂತಹ ಆಚರಣೆಗಳು ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಅವಕಾಶ ನೀಡುತ್ತವೆ  ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿಚ್ಛೇದನ ನೀಡುತ್ತಿದ್ದಾರೆ  ಇಂತಹ ವಿಚ್ಛೇದನ ಸಂವಿಧಾನಬದ್ಧವಲ್ಲ. ಇಂತಹ ತಲಾಖಗೆ ಕೇಂದ್ರ ಸರಕಾರ ನಿಷೇಧ ಹೇರಲಿ

  • ಅಬ್ದುಲ್ ರಹಿಮಾನ್  ಬಂಟ್ವಾಳ