ಬೈಂದೂರು ತಾಲೂಕು ಬಜೆಟಿನಲ್ಲಿ ಘೋಷಣೆ ಮಾತ್ರವೇ ಆಗದಿರಲಿ

ನಾಲ್ಕು ದಶಕದಿಂದ ತಾಲೂಕಿನ ಕನಸನ್ನು ತನ್ನೊಳಗಿಟ್ಟುಕೊಂಡ ಬೈಂದೂರಿನ ಜನತೆ ಎರಡನೇ ಬಾರಿ ತಾವು ಮೂರ್ಖರಾಗುತ್ತಿದ್ದೇವೋ ಎಂದು ಯೋಚಿಸುವಂತಾಗಿದೆ. ಈ ಹಿಂದೆ 2013ರಲ್ಲಿ ತಾಲೂಕು ಘೋಷಣೆ ಆಯಿತೆಂದು ಖುಷಿಪಟ್ಟು ಉಸ್ತುವಾರಿ ಸಚಿವರನ್ನು ಮತ್ತು ಜನಪ್ರತಿನಿಧಿಗಳನ್ನು ಸಮ್ಮಾನಿಸಿ ಸಂಭ್ರಮಿಸಿದ್ದು ಬಿಟ್ಟರೆ ಕೊನೆಗೆ ಅದೊಂದು ಚುನಾವಣಾ ಗಿಮಿಕ್ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಈಗ ಪುನಃ ಇತಿಹಾಸ ಪುನರಾವರ್ತನೆಯಾಗುತ್ತಿರುವಂತಿದೆ. ಏಕೆಂದರೆ ಬಜೆಟ್ ಘೋಷಣೆ ಬಿಟ್ಟರೆ ತಳ ಮಟ್ಟದಲ್ಲಿ ಅದರ ಜಾರಿಯಾಗುವ ಯಾವ ಲಕ್ಷಣವೂ ಕಾಣುಸುತ್ತಿಲ್ಲ.
ಸಣ್ಣ ತಾಲೂಕೂಗಳ ರಚನೆ ಆಡಳಿತಾತ್ಮಕ ದೃಷ್ಟಿಯಿಂದ ಇಂದಿನ ಅಗತ್ಯ. ಗಂಗೊಳ್ಳಿ ಮತ್ತು ಶಂಕರನಾರಾಯಣದಂತಹ ದೂರದ ಹಳ್ಳಿಗಳನ್ನು ಹೊರತುಪಡಿಸಿಯೂ ಬೈಂದೂರಿಗೆ ತಾಲೂಕಾಗುವ ಎಲ್ಲ ಅರ್ಹತೆ ಇದೆ. ತಾಲೂಕಿನ ಅಗತ್ಯದ ಎಲ್ಲಾ ಕಾರ್ಯಾಲಯಗಳು ಈಗಾಗಲೇ ಇಲ್ಲಿ ಇರುವುದರಿಂದ ಇನ್ನಷ್ಟು ವಿಳಂಬ ಮಾಡುವುದು ಸರಿಯಲ್ಲ

  • ಚಂದ್ರಶೇಖರ ನಾವುಡ  ಬೈಂದೂರು