ಬಸ್ ತಂಗುದಾಣ ಕುಡುಕರ ಭಿಕ್ಷುಕರ ಆವಾಸ ಸ್ಥಾನವಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ

ದ ಕ ಜಿಲ್ಲೆಯಲ್ಲಿ ನೂರಾರು ಬಸ್ ತಂಗುದಾಣಗಳಿವೆ ಆದರೆ ಹೆಚ್ಚಿನ ಬಸ್ ನಿಲ್ದಾಣಗಳಲ್ಲಿ ಜನರು ನಿಲ್ಲುವುದಿಲ್ಲ ಮಹಿಳೆಯರು ಯುವತಿಯರಂತೂ ಕೆಲವು ಬಸ್ ನಿಲ್ದಾಣಗಳ ಒಳಗೆ ಹೋಗುವುದೇ ಇಲ್ಲ ಅಷ್ಟೊಂದು ಗಲೀಜು ನಿಲ್ದಾಣದೊಳಗೆ ಹರಡಿಕೊಂಡಿರುತ್ತದೆ ಮತ್ತು ಅಲ್ಲಿ ಯಾರೋ ಮಲಗಿರುತ್ತಾರೆ ಕುಡಿದು ಬೋದ ಇಲ್ಲದಂತೆ ಮಲಗುವವರಿಗೆ ನಶೆ ಇಳಿಯುವರೆಗೆ ಈ ನಿಲ್ದಾಣವೇ ಪ್ರಶಸ್ತ ತಾಣವಾದಂತಿದೆ ಮತ್ತೊಂದೆಡೆ ಕತ್ತಲಾಗುತ್ತಿದ್ದಂತೆ ಕೆಲ ಭಿಕ್ಷುಕರು ನಿಲ್ದಾಣದೊಳಗೆ ತಮ್ಮ ಹರಕು ಚೀಲಗಳನ್ನು ತಂದಿಟ್ಟು ಅದರಲ್ಲಿರುವ ಪ್ಲಾಸ್ಟಿಕ್ ಚೀಲದಿಂದ ಹರಕುಮುರುಕು ಬಟ್ಟೆಗಳನ್ನು ಹರಡಿ ಅಲ್ಲಿ ಮಲಗಿ ಬಿಡುತ್ತಾರೆ ಇನ್ನು ಕೆಲವರು ಅಲ್ಲಿಯೇ ಅರೆ ಬರೆ ತಿಂದು ಬಿಸಾಕುವುದೆಲ್ಲ ಮಾಡುತ್ತಿರುತ್ತಾರೆ ಬಸ್ ನಿಲ್ದಾಣದೊಳಗೆ ಮಲಗಲು ಆಗದಂತೆ ಹೆಚ್ಚಿನ ಕಡೆ ಬಸ್ ನಿಲ್ದಾಣಗಳ ರಚನೆಯಾಗಿದೆ ಸಂಬಂಧಪಟ್ಟವರು ಮುಂದೆ ಬಸ್ ನಿಲ್ದಾಣ ರಚಿಸುವಾಗ ಕುಡುಕರ ಭಿಕ್ಷುಕರ ಆವಾಸ ಸ್ಥಾನವಾಗದಂತೆ ಎಚ್ಚರ ವಹಿಸುವುದೊಳಿತು

  • ಕಿರಣಕುಮಾರ್  ಮಂಗಳೂರು