ವರ್ಣಾಶ್ರಮ ವ್ಯವಸ್ಥೆ ವಿರುದ್ಧವೂ ಬಿಜೆಪಿ ಹೋರಾಡಲಿ

ಟಿಪ್ಪು ಜಯಂತಿ ಸಂದರ್ಭ ಇತಿಹಾಸದಲ್ಲಾದ ತಪ್ಪುಗಳನ್ನು ತಿದ್ದಲು ಬಿಜೆಪಿ ಮುಂದಾಗಿದೆ ಅವರ ಪ್ರಕಾರ ಇದು ಸರಿ ಟಿಪ್ಪು ಮತಾಂಧ ಅತ್ಯಾಚಾರಿ ಮೂಲಭೂತವಾದಿ ಎಂದೆಲ್ಲಾ ಹೇಳುತ್ತಿರುವ ಬಿಜೆಪಿ ನಾಯಕರು ಆತನ ಜಯಂತಿ ಆಚರಣೆಯನ್ನು ವಿರೋಧಿಸುತ್ತಿದ್ದಾರೆ ವಿರೋಧಿಸಲಿ ಆದರೆ ಇದೇ ಸಂದರ್ಭ ಸನಾತನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ವರ್ಣಾಶ್ರಮ ವ್ಯವಸ್ಥೆ ವಿರುದ್ಧವೂ ಧ್ವನಿಯೆತ್ತಲಿ ಅದನ್ನು ಆಚರಿಸಿದವರನ್ನೂ ಖಂಡಿಸಲಿ ಅಂಥವರ ಜಯಂತಿ ಆಚರಣೆಯನ್ನು ವಿರೋಧಿಸಲಿ ಈಗಲೂ ಜೀವಂತವಾಗಿರುವ ಈ ವ್ಯವಸ್ಥೆ ನಾಶ ಮಾಡಲು ಹೋರಾಟ ನಡೆಸಲಿ ಇಲ್ಲದಿದ್ದರೆ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಬಿಜೆಪಿ ಟಿಪ್ಪು ಜಯಂತಿ ವಿರೋಧಿಸುತ್ತಿದೆ ಎಂದು ಜನ ಅಪಾರ್ಥ ಮಾಡಿಕೊಂಡಾರು

  • ಸುಧಾಕರ ಅಮೀನ್  ತೊಕ್ಕೊಟ್ಟು