ಬಯೋಮೆಟ್ರಿಕ್ ಶಾಪವಾಗದಂತೆ ನೋಡಿಕೊಳ್ಳಿ

ಪಡಿತರ ವಿತರಣೆಯಲ್ಲಿನ ಪಾರದರ್ಶಕತೆ ಕಾಪಾಡಲು ಹಾಗೂ ಮಧ್ಯವರ್ತಿ ಹಾವಳಿ ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುತ್ತಿರುವ ಸರಕಾರದ ಕ್ರಮ ಸ್ವಾಗತಾರ್ಹವಾದರೂ ಕೂಡಾ ಅದರ ಅನುಷ್ಠಾನ ಮಾತ್ರ ಅಸಮಾಧಾನಕ್ಕೆ ಎಡೆಮಾಡಿಕೊಡುತ್ತಿದೆ ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲು ಅತ್ಯುತ್ತಮ ನೆಟ್ವರ್ಕ್ ಸೌಲಭ್ಯ ಒದಗಿಸಿ ಈ ಕಾರ್ಯಕ್ಕೆ ಮುಂದಾಗಬೇಕಾಗಿತ್ತು ಇಂಟರ್ನೆಟ್ ಸಮಸ್ಯೆಯಿಂದಾಗಿ ಬಡಜನತೆ ಪಡಿತರ ಸಿಗದೆ ಉಪವಾಸ ಬೀಳದಂತೆ ಎಚ್ಚರಿಕೆ ವಹಿಸಬೇಕಿದೆ ಪಡಿತರವೇ ಸರ್ವಸ್ವ ಪಡಿತರದಿಂದಲೇ ಪರಿವಾರ  ಎಂದು ಬದುಕುತ್ತಿರುವ ಅನೇಕ ಕುಟುಂಬಗಳಿಗೆ ಬಯೋಮೆಟ್ರಿಕ್ ಶಾಪವಾಗದಂತೆ ನೋಡಿಕೊಳ್ಳಿ. ಜನ ಹಿತಕ್ಕಾಗಿ ಯೋಜನೆಗಳನ್ನು ಜಾರಿಗೆ ತರುವ ಸಮಯದಲ್ಲಿ ಇರುವ ಕಾಳಜಿ ಅದರ ಅನುಷ್ಠಾನದ ವೇಳೆಯಲ್ಲಿಯೂ ಇದ್ದರೆ ಯಾವ ಸರಕಾರಿ ಯೋಜನೆಯೂ ವಿಫಲವಾಗುವುದಿಲ್ಲ

  • ದಿನೇಶ್ ಸುವರ್ಣ  ಕರಂಬಾರು ಬಜಪೆ

LEAVE A REPLY