ನಾಯಿ ಹಿಡಿಯಲು ಬಂದ ಚಿರತೆ ಬಾವಿಯಲ್ಲಿ ಬಂಧಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನಾಯಿಯೊಂದನ್ನು ಭೇಟೆಯಾಡುವ ಭರದಿಂದ ಅಟ್ಟಿಸಿಕೊಂಡು ಬಂದು ಆವರಣವಿಲ್ಲದ ಬಾವಿಯೊಗೆ ಬಂಧಿಯಾದ ಘಟನೆ ಸಿದ್ಧಾಪುರದ ಉಳ್ಳೂರು 74 ಎಂಬಲ್ಲಿ ಗುಡ್ಡೆಕೇರಿ ರಘುರಾನ ಶೆಟ್ಟಿ ಎಂಬುವರ ಮನೆಯ ಮುಂದೆ ಭಾನುವಾರ ಬೆಳಕಿಗೆ ಬಂದಿದೆ.

ರಾತ್ರಿ 3 ಗಂಟೆಯ ಸಮಯದಲ್ಲಿ ನಾಯಿ ಬೊಬ್ಬೆ ಇಟ್ಟು ಓಡಿಬರುತ್ತಿರುವ ಶಬ್ಧಕ್ಕೆ ಎಚ್ಚರಗೊಂಡು ಮನೆಯಿಂದ ಹೊರಬಂದು ನೋಡಿದ್ದಾಗ, ಚಿರತೆಯೊಂದು ಬಾವಿಯಲ್ಲಿ ಬಿದ್ದಿರುವುದನ್ನು ಜನ ಕಂಡರು. ಅಂಗಳ ಬಾವಿಯಲ್ಲಿ ಚಿರತೆ ಕಂಡು ಮನೆಯವರು ಹೌಹಾರಿದರು. ನಂತರ ಬೆಳಗ್ಗೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರಿಗೆ ವಿಷಯ ಮುಟ್ಟಿಸಿದರು.

5knd3

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಸ್ಥಳೀಯ ಯುವಕರ ಸಹಾಯದಿಂದ ಬಲೆಯ ಮೂಲಕ ಸುರಕ್ಷಿತವಾಗಿ ಮೇಲೇತ್ತಿ ಕಮಲಶಿಲೆಯ ಬಳಿಯ ಪಾರೆಯ ಸುರಕ್ಷಿತ ಅರಣ್ಯಕ್ಕೆ ಬಿಟ್ಟರು.

ಅರಣ್ಯ ನಾಶದ ಪರಿಣಾಮ ಪ್ರಾಣಿ ಪಕ್ಷಿಗಳ ಆಹಾರ ಪದ್ದತಿಯ ಮೇಲೆ ಪರಿಣಾಮ ಆಹಾರ ನೀರು ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಪ್ರಾಣಿ ಪಕ್ಷಿಗಳು ಮೊದಮೊದಲು ಗದ್ದೆ ಹಾಗೂ ತೋಟಗಳಿಗೆ ಆಹಾರ ನೀರು ಅರಸಿ ಬರುತ್ತಿದ್ದರೆ, ಇಗೀಗ  ನೇರವಾಗಿ ಮನೆಗಳ ಪರಿಸರಕ್ಕೆ ಬರುತ್ತಿವೆ.