ಲಕ್ನೋ ಶಾಲೆಯಲ್ಲಿ ಪ್ರತ್ಯಕ್ಷವಾದ ಚಿರತೆ

ಸಾಂದರ್ಭಿಕ ಚಿತ್ರ

ಲಕ್ನೋ : ಭಿನ್ನ ಸಾಮಥ್ರ್ಯದ ಮಕ್ಕಳ ಖಾಸಗಿ ಶಾಲೆಯೊಂದರಲ್ಲಿ ಶನಿವಾರ ಚಿರತೆಯೊಂದು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಭಾರೀ ಭಯ ಸೃಷ್ಟಿಸಿದೆ.  ಬೆಳಿಗ್ಗೆ ವಿದ್ಯಾರ್ಥಿಗಳು ಪ್ರಾರ್ಥನೆ ಮುಗಿಸಿ ತಮ್ಮ ತರಗತಿಗಳಿಗೆ ಮರಳಿದ ನಂತರ ಸೀಸಿಟಿವಿ ದೃಶ್ಯಾವಳಿಗಳನ್ನು ಪ್ರಿನ್ಸಿಪಾಲ್ ಜಿಯೋಸಿಯಾ ಮೆರ್ರಿ  ಪರಿಶೀಲಿಸುತ್ತಿದ್ದಾಗ ಪ್ರಾರ್ಥನಾ ಮೈದಾನದ ಮುಖ್ಯ ವೇದಿಕೆಯತ್ತ ಚಿರತೆಯೊಂದು ಸಾಗುತ್ತಿರುವುದನ್ನು ಗಮನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಅವರು ಎಲ್ಲಾ ತರಗತಿ ಕೊಠಡಿಗಳನ್ನು ಮುಚ್ಚಲು ಕ್ರಮ ಕೈಗೊಂಡು ವಿದ್ಯಾರ್ಥಿಗಳನ್ನು ಹತ್ತಿರದ ಹಾಸ್ಟೆಲ್ ಕಟ್ಟಡಕ್ಕೆ ಸ್ಥಳಾಂತರಿಸಿದರು.  ಪ್ರಿನ್ಸಿಪಾಲ್ ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು 8 ಗಂಟೆಗಳ ಸತತ ಕಾರ್ಯಾಚರಣೆಯ ನಂತರ  ಪ್ರಾರ್ಥನಾ ಮೈದಾನದ ಹತ್ತಿರದ ನೆಲಮಹಡಿಯಲ್ಲಿ ಅಡಗಿ ಕುಳಿತ ಚಿರತೆಯನ್ನು ಪತ್ತೆ ಹಚ್ಚಿದ್ದರು. ಪ್ರಾಣಿ ಸಂಗ್ರಹಾಲಯದ ವೈದ್ಯರು ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿದ ಕೂಡಲೇ ಪ್ರಜ್ಞೆ ತಪ್ಪಿ ಬಿದ್ದ ಚಿರತೆಯನ್ನು ಬೋನಿನೊಳಕ್ಕೆ ಹಾಕಿ ಕೊಂಡೊಯ್ಯಲಾಯಿತು.

 

 

LEAVE A REPLY