ಸಾಲಗಳ ಬಡ್ಡಿದರ ತಗ್ಗುವ ಸಾಧ್ಯತೆ

ಸಾಂದರ್ಭಿಕ ಚಿತ್ರ

ಕರೆನ್ಸಿ ಅಮಾನ್ಯೀಕರಣ ಎಫೆಕ್ಟ್

  • ನೂಪ್ ರಾಯ್

ಕೇಂದ್ರ ಸರ್ಕಾರದ ರೂಪಾಯಿ ಅಮಾನ್ಯೀಕರಣ ನಿರ್ಧಾರದಿಂದ  ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾಗುತ್ತವೆ ಎಂಬ ಸರ್ವಸಮ್ಮತ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿ ದರದ ನಿರ್ಣಯಕ್ಕೆ ಆಧಾರವಾದ 10 ವರ್ಷಗಳ ಅವಧಿಯ ಸರ್ಕಾರಿ ಬಾಂಡ್ ಮೇಲಿನ ಲಾಭಾಂಶ ಮೂಲದಲ್ಲೇ ಶೇ 25ರಷ್ಟು ಕುಸಿದಿದೆ. ಅಮಾನ್ಯೀಕರಣದಿಂದಾಗಿ   ಬ್ಯಾಂಕುಗಳಲ್ಲಿ ಶೇಖರವಾಗುವ ನಿಧಿಯ ವೆಚ್ಚ ಕಡಿಮೆಯಾಗುತ್ತದೆ.

ಸಾಲ ನೀಡುವ ಸಂಸ್ಥೆಗಳು ಈಗ ತಮ್ಮ ಬಳಿ ಇರುವ ಹಣವನ್ನು ಹೇಗೆ ವಿನಿಯೋಗಿಸುವುದು ಎಂದು ಯೋಚಿಸುತ್ತಿದ್ದಾರೆ. ಹಾಗಾಗಿ ಠೇವಣಿಗಳನ್ನು ಬಾಂಡ್ ರೂಪದಲ್ಲಿ ಹೂಡಲಾಗುತ್ತದೆ. ಬಾಂಡ್‍ಗಳ ಬೆಲೆ ಏರುತ್ತದೆ. ಬಾಂಡುಗಳಿಂದ ಒದಗುವ ಲಾಭಾಂಶ ಮತ್ತು ಬ್ಯಾಂಕ್ ಬಡ್ಡಿ ದರಗಳಿಗೆ ನೇರವಾದ ಸಂಬಂಧ ಇರುತ್ತದೆ. ಬಡ್ಡಿ ದರ ನಿಗದಿಪಡಿಸುವ ಹೊಸ ನಿಯಮ ಜಾರಿಗೆ ಬಂದ ನಂತರ ಬ್ಯಾಂಕುಗಳ ನಿಧಿ ನಿರ್ವಹಣೆ ವೆಚ್ಚ ಕಡಿಮೆಯಾದಂತೆಲ್ಲಾ ಗ್ರಾಹಕರಿಗೆ ಕಡಿಮೆ ದರದ ಬಡ್ಡಿ ವಿಧಿಸುವುದು ಅನಿವಾರ್ಯವಾಗಿರುತ್ತದೆ.

ಠೇವಣಿ ಬಡ್ಡಿ ದರದಲ್ಲಿ ಹೆಚ್ಚಳವಾದಂತೆಲ್ಲಾ ಸರ್ಕಾರಿ ಬಾಂಡುಗಳಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಚಿಲ್ಲರೆ ಕ್ಷೇತ್ರದಲ್ಲಿನ ಹಣದುಬ್ಬರವೂ ಸಹ ಬಂಡವಾಳ ಹೂಡಿಕೆದಾರರನ್ನು ಬಾಂಡುಗಳಲ್ಲಿ ಹೂಡುವಂತೆ ಪ್ರೇರೇಪಿಸುತ್ತದೆ. ಬಾಂಡ್ ದರಗಳು ಹೆಚ್ಚಾಗುತ್ತಿರುವಂತೆಯಲ್ಲಾ ಬಾಂಡ್ ಮೇಲಿನ ಲಾಭಾಂಶ ಕುಸಿಯುತ್ತದೆ. ನವಂಬರ್ 8ರ ವೇಳೆಗೆ ಹತ್ತು ವರ್ಷದ ಬಾಂಡ್ ಮೇಲಿನ ಲಾಭಾಂಶ ಶೇ 6.798ಕ್ಕೆ ಕುಸಿದಿತ್ತು. ನವಂಬರ್ 15ರಂದು ಇದು 6.53ರಷ್ಟಿದ್ದು ಶೇ 28.5 ಮೂಲ ಸೂಚ್ಯಂಕದಷ್ಟು ಕುಸಿತ ಕಂಡಿದೆ. ವಿಶ್ವದ ಇತರ ಎಲ್ಲ ದೇಶಗಳಲ್ಲೂ ಬಾಂಡ್ ಮೇಲಿನ ವರಮಾನ ಹೆಚ್ಚಾಗುತ್ತಲೇ ಇದ್ದು ಅಮೆರಿಕದಲ್ಲಿ 38.44 ಬಿಪಿಎಸ್, ಟರ್ಕಿಯಲ್ಲಿ 82.5 ಬಿಪಿಎಸ್ ಮತ್ತು ಜರ್ಮನಿಯಲ್ಲಿ 12.5 ಬಿಪಿಎಸ್ ಹೆಚ್ಚಾಗಿದೆ.  ಹೆಚ್ಚು ಹೆಚ್ಚು ದ್ರವ್ಯರೂಪದ ಹಣ ಚಾಲ್ತಿಗೆ ಬಂದಂತೆಲ್ಲಾ ಆರ್ ಬಿ ಐ ಬಾಂಡ್‍ಗಳನ್ನು ಸೆಕಂಡರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಆಗ ಮಾತ್ರವೇ ಪರಿಸ್ಥಿತಿಯನ್ನು ನಿಯಂತ್ರಿಸುವುದು ಸಾಧ್ಯ. ಇದುವರೆಗೂ ಆರ್ ಬಿ ಐ ಕೈಗೊಳ್ಳುತ್ತಿದ್ದ ನಿರ್ಧಾರಗಳಿಗೆ ಇದು ವ್ಯತಿರಿಕ್ತವಾಗಿರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವನ್ನು ಚಲನಶೀಲವಾಗಿರಿಲು ಅರ್ ಬಿ ಐ 2 ಲಕ್ಷ ಕೋಟಿ ರೂ ಮೌಲ್ಯದ ಬಾಂಡುಗಳನ್ನು ಸೆಕಂಡರಿ ಮಾರುಕಟ್ಟೆಯಲ್ಲಿ ಖರೀದಿಸಿದೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಚಾಲ್ತಿಯಲ್ಲಿ ಆರಂಭಿಕ ಹೆಚ್ಚಳ ಕಂಡಂತೆಲ್ಲಾ ಆರ್ ಬಿ ಐ ತನ್ನ ದಿನನಿತ್ಯದ ರಿವರ್ಸ್ ರಿಪೋಎಸ್ ಮಾದರಿಯನ್ನು ಕೈಬಿಟ್ಟು ಹೊಸ ಮಾರ್ಗವನ್ನು ಅನುಸರಿಸಿ ಚಲನಶೀಲತೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಕಡಿಮೆ ಅವಧಿಯ ಬಾಂಡುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ದಿನ ನಿತ್ಯ ಬ್ಯಾಂಕುಗಳು 80 ಸಾವಿರ ಕೋಟಿ ರೂ ಮೌಲ್ಯದ ಹಣವನ್ನು ರಿಸರ್ವ ಬ್ಯಾಂಕಿಗೆ ಸಲ್ಲಿಸಿದೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬ್ಯಾಂಕುಗಳು ತಮ್ಮ  ಸಾಲದ ಬಡ್ಡಿ ದರಗಳನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.

ರೂಪಾಯಿ ಅಮಾನ್ಯೀಕರಣ ಪ್ರಕ್ರಿಯೆಯಿಂದ ತಮ್ಮ ಬ್ಯಾಂಕಿನ ಮೇಲೆ ತೀವ್ರ ಪರಿಣಾಮಗಳುಂಟಾಗುತ್ತವೆ ಎಂದು ಎಸ್ ಬಿ ಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳುತ್ತಾರೆ. ಐಸಿಐಸಿಐ ಬ್ಯಾಂಕಿನ ನಿವೃತ್ತ ಸಿಇಒ ಮತ್ತು ಬ್ರಿಕ್ಸ್ ರಾಷ್ಟ್ರಗಳ  ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನ ಅಧ್ಯಕ್ಷ ಕೆ ವಿ ಕಾಮತ್ ಅವರ ಅಭಿಪ್ರಾಯದಲ್ಲಿ ಬ್ಯಾಂಕುಗಳು ಶೇ 1ರಷ್ಟು ಬಡ್ಡಿದರಗಳನ್ನು ಕಡಿಮೆ ಮಾಡಲಿವೆ. ಆದರೆ ಕಡಿಮೆ ಬಡ್ಡಿ ದರಗಳಿಂದ ಸಾಲದ ಪ್ರಮಾಣ ಹೆಚ್ಚಾಗುತ್ತದೆ ಎನ್ನುವುದು ಅನುಮಾನ ಎಂದು ಇಕ್ರಾ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಬ್ಯಾಂಕುಗಳಲ್ಲಿ ಠೇವಣಿಯ ಪ್ರಮಾಣ ಹೆಚ್ಚಾದಂತೆಲ್ಲಾ ಸಾಲದ ಮೇಲೆ ಪರಿಣಾಮವೂ ಗಂಭೀರವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಲದ ಬಡ್ಡಿದರ ಕಡಿಮೆಯಾಗುವುದೋ ಇಲ್ಲವೋ ಹೇಳಲಾಗುವುದಿಲ್ಲ ಎಂದು ಇಕ್ರಾ ಸಂಸ್ಥೆಯ ಕಾರ್ತಿಕ್ ಶ್ರೀನಿವಾಸನ್ ಹೇಳುತ್ತಾರೆ.