ಧೋನಿ `ಹೆಲಿಕಾಪ್ಟರ್ ಶಾಟ್’ಗೆ ಫಿದಾ ಆಗಿರುವ ಲೆಜೆಂಡ್ ಕ್ರಿಕೆಟರ್ಸ್

  • ಎಸ್. ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಮಹೇಂದ್ರ ಸಿಂಗ್ ಧೋನಿ ವರ್ಲ್ಡ್ ಕ್ರಿಕೆಟಿನಲ್ಲಿ ಗುರುತಿಸಿ ಕೊಂಡಿರುವ ಒಬ್ಬ ಅಪರೂಪದ ಕ್ರಿಕೆಟರ್. ಕ್ರಿಕೆಟಿಗೆ ಪಾದಾರ್ಪಣೆ ಮಾಡಿದಲ್ಲಿಂದ ಎಂ ಎಸ್ ಧೋನಿ ತಮ್ಮ ಮನಮೋಹಕ ಹೊಡೆತಗಳಿಂದ ಪ್ರಸಿದ್ಧಿಗೆ ಬಂದಂತಹ ಆಟಗಾರ. ಅದರಲ್ಲೂ ಧೋನಿ ಹೊಡೆಯುವ `ಹೆಲಿಕಾಪ್ಟರ್ ಶಾಟ್’ಗೆ ಮನಸೋಲದ ಕ್ರಿಕೆಟ್ ಅಭಿಮಾನಿಗಳೇ ಇಲ್ಲ. ಈ ಅಪರೂಪದ ಶಾಟಿನಿಂದಲೇ ಧೋನಿಯ ಕ್ರಿಕೆಟ್ ಲೈಫ್ ಕೂಡ ಚೇಂಜ್ ಆಗಿತ್ತು.

2004ರಲ್ಲಿ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಧೋನಿ ಮೊದಲ ನಾಲ್ಕು ಪಂದ್ಯಗಳಲ್ಲಿ ವೈಫಲ್ಯತೆ ಕಂಡಿದ್ದರು. ನಂತರ ಕೆಳಕ್ರಮಾಂಕದಿಂದ ಬ್ಯಾಟಿಂಗ್ ಪ್ರಮೋಷನ್ ಪಡೆದುಕೊಂಡ ಇವರು ರನ್ನುಗಳ ಕೊಳ್ಳೆ ಹೊಡೆಯಲು ಆರಂಭಿಸಿದರು. ಆಗಿನ ನಾಯಕರುಗಳಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರುಗಳಿಗೆ ಶಿಸ್ತಿನ ಆಟಗಾರನಾಗಿದ್ದ ಧೋನಿ ಗ್ರೇಟ್ ಫಿನಿಶರ್ ಕೂಡ.

ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೇಟ್ ಲೀ ಮೈದಾನದಲ್ಲಿ ಬ್ಯಾಟ್ ಹಿಡಿದು ಧೋನಿಯ ಹೆಲಿಕಾಪ್ಟರ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಈ ಶಾಟ್ ಹೊಡೆಯುವುದು ಸುಲಭದ ವಿಷಯವಲ್ಲ. ಆದರೂ, ಈ ಶಾಟ್ ಹೊಡೆಯಲು ಹೊರಟ ಈ ಮೂವರು ವಿಫಲರಾದರು.

ಈ ಮೂವರ ಪ್ರಯತ್ನದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸಾದವರು ವೀರೇಂದ್ರ ಸೆಹ್ವಾಗ್ ಮಾತ್ರ. ವಿವಿಎಸ್ ಲಕ್ಷ್ಮಣ್ ಮತ್ತು ಬ್ರೇಟ್ ಲೀ ಈ ಶಾಟ್ ಸಮೀಪಕ್ಕೂ ಬರಲು ವಿಫಲರಾದರು. ಆದರೆ,

ವೀರೇಂದ್ರ ಸೆಹ್ವಾಗ್ ಅವರ ಹೊಡೆತ ಮಾತ್ರ ಹೆಚ್ಚು ಕಡಿಮೆ ಧೋನಿ ಹೆಲಿಕಾಪ್ಟರ್ ಶಾಟಿಗೆ ಹತ್ತಿರವಾಗಿತ್ತು.ಆದರೆ, ಧೋನಿಯ ಹಾಗೆ ಹೆಲಿಕಾಪ್ಟರ್ ಶಾಟ್ ಹೊಡೆಯಲು ಇವರಿಂದ ಸಾಧ್ಯವಾಗಲಿಲ್ಲ. ಅದಕ್ಕೆ ಧೋನಿ ಈ ಹೊಡೆತದಿಂದಾಗಿಯೇ ಜನಪ್ರಿಯರಾದದ್ದು. ಈ ಶಾಟಿನಿಂದಲೇ ಧೋನಿ ಟೀಂ ಇಂಡಿಯಾಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟದ್ದು. ಹಾಗಾಗಿ ಕ್ರಿಕೆಟ್ ಜಗತ್ತು ಧೋನಿ ಅವರ ಹೆಲಿಕಾಪ್ಟರ್ ಶಾಟಿಗೆ ಫಿದಾ ಆಗಿರುವುದು.