ಕಾನೂನು ಶಿಬಿರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ಜಿಲ್ಲಾ ಲೀಗಲ್ ಸರ್ವೀಸ್ ಅಥೋರಿಟಿಯ ಆಶ್ರಯದಲ್ಲಿ ಮೊಬೈಲ್ ಲೋಕ್ ಅದಾಲತ್ತಿನ ಭಾಗವಾಗಿ ಪಂಚಾಯತು ಮಟ್ಟದಲ್ಲಿ ಜರಗುವ ಕಾನೂನು ಶಿಬಿರವನ್ನು ಬುಧವಾರ ಬದಿಯಡ್ಕ ಗ್ರಾಮಪಂಚಾಯತಿನಲ್ಲಿ ಪಂಚಾಯತು ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ಉದ್ಘಾಟಿಸಿದರು.

ಆ ಸಂದರ್ಭದಲ್ಲಿ ಮಾತನಾಡಿದ ಅವರು ಮಹಿಳೆಯರ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ವಿವರಿಸಿದರು. “ಕಾನೂನಿನ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ. ಕಾನೂನಿಗೆ ವಿರುದ್ಧವಾಗಿ ನಡೆದುದನ್ನು ಪ್ರತಿಭಟಿಸಿ, ದೂರನ್ನು ನೀಡಲು ಹಿಂಜರಿಯಬಾರದು” ಎಂದು ಕರೆಯಿತ್ತರು.

ಏ 15ರಿಂದ ವರ್ಕಾಡಿಯಲ್ಲಿ ಆರಂಭಗೊಂಡ ಮೊಬೈಲ್ ಅದಾಲತ್ ಶಿಬಿರವು ಇಂದು ಬೇಡಡ್ಕ ಗ್ರಾಮಪಂಚಾಯತಿನಲ್ಲಿ ಕೊನೆಗೊಳ್ಳಲಿದೆ. ಹಲವಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ.