ಮೊದಲು ರಸ್ತೆ ಮಾಡುವುದು ದೊಡ್ಡ ಸಾಧನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಬಹಳ ಕೊಚ್ಚಿಕೊಂಡರು. ಕಾಂಗ್ರೆಸ್ ಸರಕಾರವನ್ನು ದೂಷಣೆ ಮಾಡಿದ್ದೇ ಮಾಡಿದ್ದು. ಆದರೆ ಇವರು ಮೊದಲು ಇದ್ದ ರಸ್ತೆಗೆ ಡಾಮರು ಕಾಂಕ್ರಿಟ್ ಮಾತ್ರ ಹಾಕಿ ಅದೇ ನಮ್ಮ ಸಾಧನೆ ಎಂದು ಬಡಾಯಿಕೊಚ್ಚಿಕೊಳ್ಳುವುದು ಎಷ್ಟು ನ್ಯಾಯ ಕಾಂಗ್ರೆಸ್ ಸರಕಾರ 60 ವರ್ಷಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ರಸ್ತೆ ಸಂಪರ್ಕವನ್ನು ಕಲ್ಪಿಸಿದೆ ಇದು ದೊಡ್ಡ ಸಾಧನೆ ಒಂದು ಊರಿಗೆ ಮೊದಲು ರಸ್ತೆ ಮಾಡುವುದು ದೊಡ್ಡ ಸಾಧನೆ ಆಮೇಲೆ ಅದಕ್ಕೆ ಡಾಮರು ಕಾಂಕ್ರಿಟೀಕರಣ ಮಾಡುವುದು ದೊಡ್ಡ ಸಾಧನೆ ಏನೂ ಅಲ್ಲ ಕಾಂಗ್ರೆಸ್ ಸರಕಾರ ಮಾಡಿ ಇಟ್ಟ ರಸ್ತೆಯನ್ನು ರಿಪೇರಿ ಮಾಡಿ ಡಾಮರು ಹಾಕಿ ಕಾಂಕ್ರಿಟೀಕರಣ ಮಾಡಿ ಅದನ್ನು ನಾವು ಮಾಡಿದ್ದು ಈಗ ದೇಶದ ರಸ್ತೆಗಳು ಎಷ್ಟು ಸುಂದರವಾಗಿದೆ ಎಂದು ನೋಡಿ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿ ಉದಾಹರಣೆಗೆ ಮಂಗಳೂರು ಉಡುಪಿ ರಸ್ತೆಯನ್ನು ಅಗಲ ಮಾಡಿ ಸುಂದರವಾಗಿಸುವುದಕ್ಕೂ ಆ ರಸ್ತೆ ಮೊದಲು ನಿರ್ಮಾಣ ಮಾಡಿದ ಸಾಧನೆಗೂ ಅಜಗಜಾಂತರ ವ್ಯತ್ಯಾಸವಿದೆ ಕಾಂಗ್ರೆಸ್ ಹಾಕಿಕೊಂಡ ಹಾದಿಯಲ್ಲಿ ನಡೆಯುತ್ತಿರುವ ಬಿಜೆಪಿ ನಾಯಕ ಮೋದಿ ಈ ಬಗ್ಗೆ ಆಲೋಚಿಸಬೇಕೇ ಹೊರತು ಸುಮ್ಮನೆ ರೀಲು ಬಿಡುವುದರಿಂದ ಪ್ರಧಾನಿ ಘನತೆಗೇ ಕುಂದು ನೆನಪಿರಲಿ

  • ರಫೀಕ್ ಬಿ  ಬಂಟ್ವಾಳ

LEAVE A REPLY