ಮಾಫಿಯಾ ಮಟ್ಟ ಹಾಕಿ

ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಉಡುಪಿಯಲ್ಲಿ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಮಹಿಳಾ ಜಿಲ್ಲಾಧಿಕಾರಿಯ ಮೇಲೆ ಹಲ್ಲೆ ನಡೆಸಿದ ಘಟನೆಯ ಬೆನ್ನಲ್ಲೇ ದಾವಣಗೆರೆಯಲ್ಲೂ ಅಂತಹದೊಂದು ಘಟನೆ ನಡೆದಿರುವ ಆಘಾತಕರ ಸುದ್ದಿ ಓದಿದೆ. ಅನ್ನಭಾಗ್ಯ ಯೋಜನೆಯ ಅಕ್ರಮ ತಡೆಯಲು ಯತ್ನಿಸಿದ ತಹಶೀಲ್ದಾರರು ಮತ್ತು ಆಹಾರ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿದೆ. ಅಲ್ಲದೆ ಜನಪ್ರತಿನಿಧಿಗಳು ಇಂತಹ ಕಾಳದಂಧೆಕೋರರ ಬೆನ್ನೆಲುಬಾಗಿ ನಿಂತಿದ್ದಾರೆ ಎಂಬ ಆರೋಪಗಳು ಕೂಡಾ ಕೇಳಿಬರುತ್ತಿದೆ
ಆದ್ದರಿಂದ ಈ ಘಟನೆಯನ್ನು ನಿಷ್ಪಕ್ಷಪಾತ ತನಿಖೆಗೊಳಪಡಿಸಿ ಸಂಬಂಧಿತ ಅಪರಾಧಿಗಳು ಎಷ್ಟೇ ಪ್ರಭಾವಶಾಲಿ ಇರಲಿ ಅವರನ್ನು ಮಟ್ಟಹಾಕಿ ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಲು ಸರಕಾರ ಯತ್ನಿಸಲಿ

  • ಸುಜನ್ ಕೋಟ್ಯಾನ್, ಡಯಾನ ಸರ್ಕಲ್-ಉಡುಪಿ