ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್ ಪ್ರಿಯಾ

ನಾಳೆ ಪ್ರೇಮಿಗಳ ದಿನ. ಹದಿಹರೆಯದರು ರೋಮ್ಯಾಂಟಿಕ್ ಮೂಡಿನಲ್ಲಿರುವ ಈ ಸಮಯದಲ್ಲಿಯೇ ಮಲೆಯಾಳಂ ಬೆಡಗಿಯೊಬ್ಬಳು ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾಳೆ. ಪ್ರಿಯಾ ಪ್ರಕಾಶ್ ವಾರಿಯರ್ ಎಂಬ ಚಂದದ ಬೆಡಗಿ `ಒರು ಅದರ್ ಲವ್’ ಎಂಬ ಮಲೆಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿಯ `ಮಾಣಿಕ್ಯ ಮಲಾರಾಯ ಪೂವಿ’ ಎಂಬ ಹಾಡಿನ ಸಣ್ಣ ತುಣುಕೊಂದು ರಿಲೀಸ್ ಆಗಿದ್ದು ಅದೀಗ ಇಂಟರ್ನೆಟ್ಟಿನಲ್ಲಿ ವೈರಲ್ ಆಗಿಬಿಟ್ಟಿದೆ.  ಈ ಹಾಡಿನಲ್ಲಿಯ ಪ್ರಿಯಾಳ ಎಕ್ಸ್‍ಪ್ರೆಶನ್, ಆ ಕಣ್ಣಿನ ಕುಡಿನೊಟ ಹುಡುಗರ ಹೃದಯವನ್ನೇ ಕಲಕುತ್ತಿದೆ. ಈ ಹಾಡಿನಲ್ಲಿಯೇ ಬೇರೆ ಬೇರೆ ಭಾಷೆಯ ವರ್ಷನ್‍ಗಳೂ ಕೂಡ ಆರಂಭವಾಗಿವೆ. ಪ್ರಿಯಾಳ ಮೊದಲ ಸಿನಿಮಾದ ಈ ಮೊದಲ ಹಾಡು ಈಗ ಯೂಟ್ಯೂಬಿನಲ್ಲಿ ಟ್ರೆಂಡಿಂಗ್ ನಂ 1 ನಲ್ಲಿ ಇದೆ. ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಜನ ಇದನ್ನು ನೋಡಿ ಖುಶಿಪಟ್ಟಿದ್ದಾರೆ.

ಸಾಮಾಜಿಕ ತಾಣದ ಹೊಸ ಸೆನ್ಸೇಷನ್ ಆಗಿ ರೂಪುಗೊಂಡಿರುವ 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯರ್ ಜನಿಸಿದ್ದು ಕೇರಳದ ತ್ರಿಶೂರಿನಲ್ಲಿ. ಪ್ರಿಯಾ ಬಿ. ಕಾಂ ಮೊದಲ ವರ್ಷದಲ್ಲಿ ಓದುತ್ತಿದ್ದು ಚಿತ್ರದಲ್ಲಿಯೂ ಈಕೆ ಸ್ಟೂಡೆಂಟ್ ಆಗಿ ನಟಿಸುತ್ತಿದ್ದಾಳೆ. ಸಿನಿಮಾ ಏಪ್ರಿಲ್ 5ರಂದು ತೆರೆಗೆ ಬರಲಿದೆ.

LEAVE A REPLY