ಬೀದಿ ದೀಪ ಆಗ್ರಹಿಸಿ ಲಾಟೀನ್ ಪ್ರತಿಭಟನೆ

ಮರಕ್ಕೆ ಲಾಟೀನು ಹಾಗೂ ನಾಮಫಲಕ ಅಳವಡಿಸಿರುವುದು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಕುದ್ಕೋಳಿ ಜಂಕ್ಷನ್ನಿನಲ್ಲಿ ಬೀದಿ ದೀಪ ಅಳವಡಿಸುವಂತೆ ಆಗ್ರಹಿಸಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಗಮನ ಸೆಳೆಯಲು ಗ್ರಾಮಸ್ಥರು ವಿಶಿಷ್ಟ ಕ್ರಮ ಅನುಸರಿಸಿದ್ದಾರೆ. ಇಲ್ಲಿನ ಜಂಕ್ಷನ್ನಿನಲ್ಲಿ ಬೀದಿ ದೀಪಗಳಿಲ್ಲದೆ ಹಲವು ಸಮಯಗಳೇ ಕಳೆದಿದೆ. ಈ ಬಗ್ಗೆ ಪಂಚಾಯತಿಗೆ ದೂರಿಕೊಂಡರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಲ್ಲಿನ ಮರವೊಂದಕ್ಕೆ ಹಳೆಯ ಲಾಟೀನು ಮತ್ತು ನಾಮಫಲಕ ಅಳವಡಿಸುವ ಮೂಲಕ ಪಂಚಾಯತ್ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.