ಮಳವಳ್ಳಿಯಲ್ಲಿ 435 ಚಿನ್ನದ ನಾಣ್ಯ ಪತ್ತೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ಮಂಡ್ಯದ ಮಳವಳ್ಳಿಯ ಬನಸಮುದ್ರ ಎಂಬಲ್ಲಿ ಬಡ ಮಹಿಳೆಯೊಬ್ಬರು ಹೊಸ ಮನೆ ನಿರ್ಮಿಸಲು ಭೂಮಿ ಅಗೆಯುತ್ತಿದ್ದಾಗ ಮಣ್ಣಿನ ಮಡಕೆಯೊಂದರಲ್ಲಿ ಪತ್ತೆಯಾದ 435 ಚಿನ್ನದ ನಾಣ್ಯಗಳನ್ನು ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ. ಲಕ್ಷ್ಮಮ್ಮ (55) ಎಂಬಾಕೆ ತನಗೆ ಸಿಕ್ಕಿದ ಅಪಾರ ಮೌಲ್ಯದ ಚಿನ್ನದ ನಾಣ್ಯವನ್ನು ಸರ್ಕಾರಕ್ಕೊಪ್ಪಿಸುವ ಪ್ರಾಮಾಣಿಕತೆ ಮರೆದಿದ್ದಾರೆ. ಈ ಪ್ರದೇಶವು ಪ್ರಾಚ್ಯ ವಸ್ತು ವಿಶೇಷತೆಗಳಿಗೆ ಮಹತ್ವ ಪಡೆದಿದೆ.