13,860 ಕೋಟಿ ರೂ ಆದಾಯ ಘೋಷಿಸಿದ ಲ್ಯಾಂಡ್ ಡೀಲರ್ ಸೆರೆ

ಅಹಮ್ಮದಾಬಾದ್ : ಇಲ್ಲಿನ ಲ್ಯಾಂಡ್ ಡೀಲರ್ ಮಹೇಶ್ ಶಾ ಎಂಬವ ಆದಾಯ ಘೋಷಣೆ ಯೋಜನೆ (ಐಡಿಎಸ್) ಪ್ರಕಾರ 13,860 ಕೋಟಿ ರೂ ಘೋಷಿಸಿಕೊಂಡಿದ್ದು, ಈತನನ್ನು ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆ ಆರಂಭಿಸಿದ್ದಾರೆ.

ಈತ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದು, ನಿನ್ನೆ ಸ್ಥಳೀಯ ಟೀವಿ ಚಾನೆಲೊಂದರಕ್ಕೆ ಸಂದರ್ಶನ ನೀಡಿ, ತನ್ನಲ್ಲಿರುವ ಇಷ್ಟೊಂದು ಹಣ “ದೊಡ್ಡ ಕುಳ”ಗಳದ್ದಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ತನ್ನಲ್ಲಿರುವ ಹಣದ ನಿಜವಾದ ಮಾಲಕರು ದೊಡ್ಡ ಉದ್ಯಮಿಗಳು, ರಾಜಕಾರಣಿಗಗಳು ಅಥವಾ ಅಧಿಕಾರಿಗಳದ್ದು ಎಂದಾತ `ಶಕ್ತಿಶಾಲಿ ಜನರ’ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾನೆ. ಈತ ಐಟಿ ಇಲಾಖೆಯೆದುರು ಸ್ವ-ಘೋಷಣೆ ಮಾಡಿರುವುದರಿಂದ ಹಣದ ನಿಜವಾದ ಮಾಲಕರ ಎದೆಯಲ್ಲಿ ನಡುಕ ಉಂಟಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ.