ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ ಜನೆವರಿ 6ಕ್ಕೆ

ಮಂಗಳೂರು : ರಾಷ್ಟ್ರೀಯ ಮಟ್ಟದ ಎರಡು ದಿನಗಳ ಲಗೋರಿ ಚಾಂಪಿಯನ್ಶಿಪ್-2018 ಜನವರಿ 6ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಲಗೋರಿ ತುಳುನಾಡು ಕಪ್ ಕಳೆದ ಬಾರಿ ಜುಲೈ ತಿಂಗಳಲ್ಲಿ ನಡೆದಿದ್ದು, ಉತ್ತಮ ಪ್ರತಿಸ್ಪಂದನೆ ದೊರಕಿತ್ತು ಎಂದು ಲಗೋರಿ ಟೂರ್ನಮೆಂಟ್ ಸಂಘಟಕ ದೀಪಕ್ ಗಂಗೊಳ್ಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಚಾಂಪಿಯನ್ಶಿಪ್ಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುಮಾರು 20ಕ್ಕೂ ಅಧಿಕ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ. ಮಂಗಳಮುಖಿ ಸಂಜನಾ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ಪಿನ ಬ್ರ್ಯಾಂಡ್ ಅಂಬಾಸಿಡರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ತಂಡಕ್ಕೆ ಸೆಲೆಕ್ಷನ್ ಟ್ರಯಲ್ ಡಿಸೆಂಬರ್ 16 ಮತ್ತು 17ರಂದು ಯುನಿವರ್ಸಿಟಿ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಯುನಿವರ್ಸಿಟಿ ಕಾಲೇಜು ಮೈದಾನದಲ್ಲಿ ಡಿಸೆಂಬರ್ 16ರಂದು 10 ಗಂಟೆಗೆ ಹಾಜರಿರಬೇಕು. 7ನೇ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ 2018ರ ಆತಿಥ್ಯ ಜವಾಬ್ದಾರಿಯನ್ನು ದಿ ಪಾಥ್ ವೆ ತಂಡ ನಿರ್ವಹಿಸಲು ಆಸಕ್ತಿ ವಹಿಸಿದೆ ಎಂದು ದೀಪಕ್ ಹೇಳಿದ್ದಾರೆ.