ಮಹಿಳಾ ಟೆಕ್ಕಿ ತಲೆಗೆ ರಾಡಿನಿಂದ ಹೊಡೆದು ಎಳೆದೊಯ್ದ ದುಷ್ಟರು

ಸಾಂದರ್ಭಿಕ ಚಿತ್ರ

ಚೆನ್ನೈ : ಪಳ್ಳಿಕರ್ನೈ ಎಂಬಲ್ಲಿರುವ ಐಟಿ ಕಂಪೆನಿಯೊಂದರ 30 ವರ್ಷದ ಮಹಿಳಾ ಉದ್ಯೋಗಿಯ ಮೇಲೆ ದುಷ್ಕರ್ಮಿಗಳು ಮಂಗಳವಾರ ಇಲ್ಲಿನ ಐಟಿ ಕಾರಿಡಾರಿನಲ್ಲಿ ಕಬ್ಬಿಣದ ರಾಡಿನಿಂದ ತಲೆಗೆ ಹಲ್ಲೆ ನಡೆಸಿದ್ದಾರೆ.

ಸಂತ್ರಸ್ತೆ ತನ್ನ ಕೆಲಸ ಮುಗಿಸಿ ಮನೆಗೆ ತನ್ನ ದ್ವಿಚಕ್ರವಾಹನದಲ್ಲಿ ಮರಳುತ್ತಿದ್ದಾಗ ತಝಂಬುರ್-ಪೆರುಂಬಕ್ಕಂ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಕೆಯ ತಲೆಗೆ ರಾಡಿನಿಂದ ಬೀಸಿದ ದುಷ್ಕರ್ಮಿಗಳು ನಂತರ ಆಕೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ. ದಾಳಿಯಿಂದ ಮಹಿಳೆ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ. ಆಕೆಗೆ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರೇ ಇಲ್ಲವೇ ಎಂಬುದು ತಿಳಿದುಬಂದಿಲ್ಲ.

LEAVE A REPLY