`ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯೇ ರೋಗಿಗಳ ಹಿತೈಷಿಗಳ ಕೋಪಕ್ಕೆ ಕಾರಣ’

ಸಾಂದರ್ಭಿಕ ಚಿತ್ರ

ನವದೆಹಲಿ : ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿಂದ ವೈದ್ಯರ ಮೇಲೆ ರೋಗಿಗಳ ಸ್ನೇಹಿತರು ಅಥವಾ ಸಂಬಂಧಿಕರು ದಾಳಿ ಮಾಡುವಂತಹ ಘಟನೆಗಳು ಹೆಚ್ಚುತ್ತಿವೆ ಎಂದಿರುವ ದಿಲ್ಲಿ ಹೈಕೋರ್ಟ್, ದೇಶದಲ್ಲಿ ಉತ್ತಮ ವೈದ್ಯಕೀಯ ಸಮಲತ್ತುಗಳ ಅಲಭ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿತು. “ನಮ್ಮ ವೈದ್ಯರು ಉದ್ಯೋಗ ಹುಡುಕಿಕೊಂಡು ಹೊರರಾಷ್ಟ್ರಗಳಿಗೆ ವಲಸೆ ಹೋಗುವುದಾದರೂ ಯಾಕೆ ? ಇದರರ್ಥ ವೈದ್ಯರಿಗಾಗಿ ನಿಮ್ಮಿಂದ(ಸರ್ಕಾರ) ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಾಗಿಲ್ಲ ಎಂದಲ್ಲವೇ ? ಇದು ಬೇಸರದ ಸಂಗತಿ. ಜಗತ್ತಿನಲ್ಲೇ ನಮ್ಮಲ್ಲೆ ಉತ್ತಮ ವೈದ್ಯಕೀಯ ಕಾಲೇಜುಗಳು ಮತ್ತು ಉತ್ತಮ ವೈದ್ಯರಿದ್ದಾರೆ. ಆದ್ದರಿಂದಲೇ ಇಲ್ಲಿಗೆ ಕಲಿಯಲು ಹೊರ ದೇಶಗಳವರು ಬರತುತ್ತಿದ್ದಾರೆ” ಎಂದು ದಿಲ್ಲಿ ಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ಜಸ್ಟಿಸ್ ಪ್ರತಿಭಾ ಸಿಂಗ್ ಅವರಿದ್ದ ಪೀಠ ವಿಷಾದ ವ್ಯಕ್ತಪಡಿಸಿತು.