ರಸ್ತೆಯಲ್ಲಿ ಕಸ ಎಸೆಯುವವರಿಗೆ ನಾಗರಿಕ ಪ್ರಜ್ಞೆ ಇಲ್ಲವೇ

ಈ ಸುದ್ದಿ ಮಾತ್ರ ಸತ್ಯ ಮೊನ್ನೆ ಮಂಗಳೂರಿಗೆ ಕಾರ್ಯನಿಮಿತ್ತ ಹಂಪನಕಟ್ಟೆಯಲ್ಲಿ ಹೋಗುತ್ತಿದ್ದೆ. ಆಗ ರೈಲ್ವೇ ಸ್ಟೇಷನ್ ರಸ್ತೆಯಿಂದ ಒಂದು ಕುಟುಂಬ ಬರುತ್ತಿದೆ. ಬಹುಶಃ ರೈಲಿನಲ್ಲಿ ಬಂದದ್ದು ಅಂತ ಕಾಣುತ್ತಿದೆ. ದೊಡ್ಡ ಬ್ಯಾಗುಗಳು ಜತೆಗಿದ್ದವು. ಇನ್ನೊಂದು ಚೀಲವಿತ್ತು. ಅದರಲ್ಲಿ ತಿಂಡಿ ಬಿಸ್ಕತ್, ಹಣ್ಣು ಹಂಪಲುಗಳ ಕಸದ ರಾಶಿಯೇ ಇತ್ತು. ಬಂದವರೇ ಆ ಕಟ್ಟು ಕಸರಾಶಿಯನ್ನು ಮಾರ್ಗದಲ್ಲಿ ಹಾಕಿದರು. ಒಟ್ಟಿಗೆ ಇದ್ದ ಮಕ್ಕಳು ಬೇಡ, ಬೇಡವೆಂದರೂ ನಾಗರಿಕ ಪ್ರಜ್ಞೆ ಇರುವ ದೊಡ್ಡವರು ಕಸದ ಚೀಲವನ್ನು ಎಸೆದರು. ಇಲ್ಲಿ ಒಂದು ಕಾಡುವ ಪ್ರಶ್ನೆ ಮಕ್ಕಳಿಗೆ ಇದ್ದ ಕಾಳಜಿ, ಬುದ್ಧಿ ಬೆಳೆದ ಆ ಹಿರಿಯರಿಗಿಲ್ಲವೆಂದು ಬಹಳ ಖೇದವೆನಿಸಿತು. ಇದು ಮಾತ್ರ ಸತ್ಯ

  • ಮುರಾರಿ  ಪುತ್ತೂರು