ಸರಕಾರಿ ಶಾಲೆಯಲ್ಲಿ ಸೌಲಭ್ಯದ ಕೊರತೆಯಿದೆ

ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕಿದ ಸರಕಾರಿ ಶಾಲೆಗಳು ಬಾಗಿಲೆಳೆಯಲು ಸೌಲಭ್ಯ ಕೊರತೆ ಮುಖ್ಯ ಕಾರಣ. ಖಾಸಗಿ ಶಾಲೆಗಳ ಥಳಕು ಬಳುಕಿನ ಎದುರು ಸರಕಾರಿ ಶಾಲೆ ಪೇಲವವಾಗಿ ಕಾಣಿಸುತ್ತಿರುವುದರಿಂದ ಪೋಷಕರು ಕಷ್ಟಪಟ್ಟಾದರೂ ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ ಸರಕಾರಿ ಶಾಲೆಗಳದ್ದು ಒಂದಿದ್ದರೆ ಇನ್ನೊಂದಿಲ್ಲ ಎಂಬ ಸ್ಥಿತಿ ಸರಕಾರ ಬಾಯಿಮಾತಿನಲ್ಲಿ ಮಾತ್ರ ಸರಕಾರಿ ಶಾಲೆಯನ್ನು ಉಳಿಸುತ್ತಿದೆಯೇ ಹೊರತು ಅದರ ಯಾವ ಯೋಜನೆಗಳೂ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಹೀಗಾಗಿ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ ಈ ನಡುವೆ ಕೆಲವು ಶಾಲೆಗಳು ದಾನಿಗಳ ನೆರವಿನಿಂದ ಖಾಸಗಿ ಶಾಲೆಗಳಿಗೆ ಸರಿಸಮಾನವಾದ ಸೌಲಭ್ಯ ಒದಗಿಸಿ ಮಕ್ಕಳನ್ನು ಆಕರ್ಷಿಸಿದ ಉದಾಹರಣೆಗಳಿವೆ ಸರಕಾರವೇಕೆ ಇಂತಹ ಮಾದರಿ ಅನುಸರಿಸಬಾರದು

  • ಪ್ರವೀರ ಆಚಾರ್ಯ  ಬಾರಕೂರು

LEAVE A REPLY