ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಡೀಸಿ ಕಚೇರಿ ಎದುರು ಕಾರ್ಮಿಕರ ಪ್ರತಿಭಟನೆ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನವ ಮಂಗಳೂರು ಬಂದರಿಗೆ ಸಂಬಂಧಪಟ್ಟು ದುಡಿಯುತ್ತಿರುವ ಶಿಪ್ಪಿಂಗ್ ಮತ್ತು ಟ್ರಾನ್ಸಪೆÇೀರ್ಟ್ ಕಂಪನಿಗಳ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಎಐಸಿಸಿಟಿಯು ಹಾಗೂ ಎಐಪಿಡಬ್ಲ್ಯುಎಫ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಎಐಸಿಸಿಟಿಯು ರಾಜ್ಯ ಜನರಲ್ ಸೆಕ್ರೆಟರಿ ಕ್ಲಿಫ್ಟನ್ ಮಾತನಾಡಿ, “ಬಂದರಿನಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು. ಅಲ್ಲದೇ ಕನಿಷ್ಠ ವೇತನ 21 ಸಾವಿರ ನೀಡಬೇಕು. ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಬೇಕು” ಎಂದು ಒತ್ತಾಯಿಸಿದರು.

“ಇಂದಿನ ದಿನಗಳಲ್ಲಿ ಸ್ವಾರ್ಥಪರನಾಗಿರುವ ಮನುಷ್ಯನಿಂದಾಗಿ ಬಡವರು ತೀರಾ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಶ್ರೀಮಂತರಾಗಿರುವ ಒಂದು ವರ್ಗ ಇನ್ನಷ್ಟು ಶ್ರೀಮಂತವಾಗುತ್ತಿದ್ದರೆ, ಬಡವರು ಕಂಗಾಲಾಗುತ್ತಿದ್ದಾರೆ. ಯುವಜನತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಹೊಂದಬೇಕು. ಸಾಲ ಸೌಲಭ್ಯವನ್ನು ಹೋರಾಟ ಮಾಡಿಯಾದರೂ ಪಡೆದುಕೊಂಡು ಸನ್ಮಾರ್ಗದತ್ತ ಸಾಗಬೇಕು” ಎಂದರು.

ಇದೇ ಸಂದರ್ಭದಲ್ಲಿ ಮಂಗಳೂರು ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.