ಕೂಲಿ ಕಾರ್ಮಿಕರ 4 ಜೋಪಡಿ ಬೆಂಕಿಗಾಹುತಿ

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಣಿಪಾಲ ಸಮೀಪದ ಸರಳೇಬೆಟ್ಟುವಿನ ನೆಹರೂ ನಗರದ ವಿಜಾಪುರ ಕಾಲೊನಿಯಲ್ಲಿ ಖಾಸಗಿ ಸಂಸ್ಧೆಗೆ ಸೇರಿದ ಭೂಮಿಯಲ್ಲಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಶೆಡ್ ಮಾಡಿಕೊಂಡು ವಾಸವಿದ್ದ ಮನೆಗಳಿಗೆ ಬೆಂಕಿ ಬಿದ್ದು ಮನೆ ಹಾಗೂ ನಗ-ನಗದು ಸುಟ್ಟು ಕರಕಲಾಗಿದೆ.

ಮನೆಮಂದಿ ಶನಿವಾರ ಬೆಳಿಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿಯ ಕೆನ್ನಾಲೆಗೆ 4 ಶೆಡ್ ಮನೆಗಳು ಸುಟ್ಟು ಕರಾಕಲಾಗಿದೆ. ಕೂಲಿ ಕಾರ್ಮಿಕರಾದ ರಂಗಪ್ಪ ಬಾದಾಮಿ ಮನೆಯಲ್ಲಿ 6,000 ರೂ ನಗದು, ಒಂದು ಜೊತೆ ಕಿವಿಯೊಲೆ, ಬಾಲಪ್ಪ ಪೂಜಾರಿಯ 10,000 ರೂ ನಗದು, ಕೃಷ್ಣಗುಡಿ ಹಿಂದಿನ ಎಂಬವರ 6,000 ರೂ ನಗದು, ಆಧಾರ್ ಕಾರ್ಡ್, ಓಟರ್ ಐಡಿ ಬೆಂಕಿಗಾಹುತಿಯಾಗಿದೆ. ಪಕ್ಕದ ಮನೆಯ ಸರಳೇಬೆಟ್ಟು ಶಾಲೆಗೆ ಹೋಗುವ ವಿದ್ಯಾರ್ಥಿ ಗೋಪಾಲನ ಸೈಕಲ್ ಸುಟ್ಟು ಕರಾಕಲಾಗಿದೆ. ಉಡುಪಿಯ ಅಗ್ನಿಶಾಮಕದಳದವರು ಬೆಂಕಿ ನಂದಿಸಿದ್ದಾರೆ.