ಕೂಲಿ ಕಾರ್ಮಿಕ ನಾಪತ್ತೆ

ಕಾಸರಗೋಡು : ಕೊರೆಕ್ಕಾನ ನಿವಾಸಿ ಕೃಷ್ಣ ನಾಯ್ಕ (41) ಎಂಬವರು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೂಲಿ ಕಾರ್ಮಿಕನಾದ ಇವರು ಜೂ 14ರಂದು ಅಪರಾಹ್ನ 2.30ರ ವೇಳೆ ಮನೆಯಿಂದ ತೆರಳಿದವರು ಮರಳಿ ಬರಲಿಲ್ಲ ಎಂದು ದೂರಲಾಗಿದೆ. ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಪತ್ನಿ ಕಾವೇರಿ ನೀಡಿದ ದೂರಿನಂತೆ ಬದಿಯಡ್ಕ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


ರಿಕ್ಷಾ ಚಾಲಕ ನಾಪತ್ತೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಪುತ್ತೂರು ತಾಲೂಕು ರೆಂಜಿಲಾಡಿ ಗ್ರಾಮದ ಪೆಲತ್ತಾಣೆ ಮನೆ ನಿವಾಸಿ ಅಬ್ಬಾಸ್ ಎಂಬವರ ಮಗನಾದ ಆದಂ ಅಲಿಯಾಸ್ ಸಾಧು (21) ಎಂಬಾತ ಗುರುವಾರದಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೋಲಿಸರಿಗೆ ದೂರು ನೀಡಲಾಗಿದೆ.

ರಿಕ್ಷಾ ಚಾಲಕನಾದ ಈತ ಬಾಡಿಗೆ ಮಾಡಲು ಹೋದವನು, ಮಧ್ಯಾಹ್ನ 2 ಗಂಟೆ ವೇಳೆಗೆ ಪೇರಡ್ಕ ಪೆಟ್ರೋಲ್ ಪಂಪಿಗೆ  ಹೋಗಿ ಪರಿಚಯದ ಧನಂಜಯ ಎಂಬವರನ್ನು ಕರೆದುಕೊಂಡು ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿಗೆ ಕರೆದೊಯ್ದಿರುವುದಾಗಿ, ಅಲ್ಲಿ ರಿಕ್ಷಾದಿಂದ ಇಳಿದು, ತನ್ನ ರಿಕ್ಷಾವನ್ನು ಪೆಟ್ರೋಲ್ ಪಂಪಿನಲ್ಲಿ ಇಡುವಂತೆಯೂ, ನಾನು ಸಂಜೆ ವೇಳೆಗೆ ಬಂದು ರಿಕ್ಷಾವನ್ನು ತೆಗೆದುಕೊಂಡು ಬರುವುದಾಗಿಯೂ, ಈಗ ನನ್ನನ್ನು ಕರೆದೊಯ್ಯಲು ಕಾರು ಬರುತ್ತದೆ ಎಂದು ಧನಂಜಯರಲ್ಲಿ ತಿಳಿಸಿ ಹೋದವನು ಹಿಂತಿರುಗಿ ಬರಲಿಲ್ಲ ಎಂದು ಆದಂ ತಂದೆ ಅಬ್ಬಾಸ್ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.