ಬಾವಿಗೆ ಬಿದ್ದ ಕಾರ್ಮಿಕ ಮೃತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಾವಿಗೆ ಬಿದ್ದು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿದ್ದ ತಲೆ ಹೊರೆ ಕಾರ್ಮಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾನೆ.

ಬದಿಯಡ್ಕ ಸಮೀಪದ ಮೂಕಂಪಾರೆ ಶ್ರೀ ಹರಿ ನಿಲಯದ ಮುರಳೀಧರ ಯಾನೆ ಆಶೋಕ (40) ಮೃತ ದುರ್ದೈವಿ. ಬದಿಯಡ್ಕದಲ್ಲಿ ತಲೆ ಹೊರೆ ಕಾರ್ಮಿಕರಾಗಿದ್ದ ಇವರು ನಾಲ್ಕು ವರ್ಷಗಳ ಹಿಂದೆ ಸ್ವಂತ ಬಾವಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ಬಾವಿಗೆ ಬಿದ್ದು ತಲೆ ಹಾಗು ಸೊಂಟಕ್ಕೆ ಗಂಭೀರ ಗಾಯಗೊಂಡು ವಿವಿಧೆಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಇದೀಗ ಇವರು ಮೃತಪಟ್ಟಿದ್ದಾರೆ.