ನೇಣುಬಿಗಿದು ಸತ್ತ ಕಾರ್ಮಿಕ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹಿರಿಯಡ್ಕ ಸಮೀಪದ ಭೈರಂಪಳ್ಳಿ ಗ್ರಾಮದ ಸಾಂತ್ಯಾರು ಎಂಬಲ್ಲಿ ಬಾವಿ ರಿಂಗ್ ಕೆಲಸ ಮಾಡುವ ಕೇರಳ ಮೂಲದ ಕಾರ್ಮಿಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಭೈರಂಪಳ್ಳಿ ಗ್ರಾಮ ಸಾಂತ್ಯಾರಿನ ಸುಬ್ರಾಯ ಪ್ರಭು ಎಂಬವರ ಮನೆ ಬಾವಿಗೆ ರಿಂಗ್ ತಯಾರಿಸುವ ಕೆಲಸಕ್ಕೆ ಬಂದಿದ್ದ ಕೇರಳ ಮೂಲದ ಆನಂದ ಎಂಬಾತ, ಪ್ರಭುವಿಗೆ ಸೇರಿದ ನಾಗಬನದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.


ವ್ಯಕ್ತಿ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಬಳಿ ನವಗ್ರಾಮ ಎಂಬಲ್ಲಿ ವಾಸ ಮಾಡಿಕೊಂಡಿದ್ದ ರವಿ (35) ಎಂಬವರು ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದ್ದು, ಪತ್ನಿ ನೀರು ತರಲೆಂದು ಹೊರಗಡೆ ಹೋಗಿದ್ದ ವೇಳೆ ಇವರು ಮನೆಯೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಶವ ಕಂಡುಬಂದಿದೆ. ಆದರೆ ಸಾವಿಗೆ  ಕಾರಣವೇನೆಂದು ತಿಳಿದುಬಂದಿಲ್ಲ.