ಕಾರ್ಮಿಕನ ಮೇಲೆ ಮಾರಕಾಸ್ತ್ರ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಪೂರ್ವಧ್ವೇಷದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಿಬ್ಬರ ಪೈಕಿ ಒಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕಳೆದ ತಿಂಗಳ 24ರಂದು ಕನ್ಯಾನ ಬಾರ್ ಸಮೀಪ ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಮರ್ತನಾಡಿ ನಿವಾಸಿ ಮಾಧವ (46) ಎಂನವರ ಮೇಲೆ ಯುವಕರಿಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಆರೋಪಿಗಳಾದ ಕನ್ಯಾನ ನಿವಾಸಿ ಚಂದ್ರಹಾಸ(21) ಮತ್ತು ದಿನೇಶ (23) ಎಂಬಿಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದರೆಂದು ಆಸ್ಪತ್ರೆಗೆ ದಾಖಲಾದ ಗಾಯಾಳು ಮಾಧವ ಪೊಲೀಸರಿಗೆ ದೂರು ನೀಡಿದ್ದರು.

ಬಂಧನಕ್ಕೆ ಬೆದರಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಪೈಕಿ ಚಂದ್ರಹಾಸನನ್ನು ವಿಟ್ಲ ಪೊಲೀಸರು ಕನ್ಯಾನದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.