ಕುವೆಂಪು ವಿವಿಯ ವಿದ್ಯಾರ್ಥಿ ಮೊಬೈಲ್ ವಿಚಾರಕ್ಕೆ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಶಿವಮೊಗ್ಗ : ಮೊಬೈಲ್ ಫೆÇೀನ್ ಪ್ರಾಣಕ್ಕೇ ಎರವಾದ ವರದಿಯಿದು. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯ ಜ್ಞಾನ ಸಹ್ಯಾದ್ರಿ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ಶ್ರೀಧರ್ ಪಾಟೀಲ್ ಎಂಬಾತ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಎಂಬಿಎ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದ. ತರಗತಿಯಲ್ಲಿ ಮೊಬೈಲ್ ನೋಡುತ್ತಿದ್ದ ಎಂದು ಆತನನ್ನು ತರಗತಿಯಿಂದ ಉಪನ್ಯಾಸಕರು ಹೊರ ಕಳುಹಿಸಿದ್ದರು. ಮಧ್ಯಾಹ್ನ ಆತ ಸಹಜವಾಗಿಯೇ ಇದ್ದನಂತೆ. ಊಟ ಮುಗಿಸಿದ ಉಳಿದ ವಿದ್ಯಾರ್ಥಿಗಳು ತರಗತಿಗೆ ತೆರಳಿದ್ದಾರೆ. ಆದರೆ ಈತ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ಹೊತ್ತಿಗೆ ಸಹಪಾಠಿಗಳು ಹಾಸ್ಟೆಲಿಗೆ ಮರಳಿದ್ದಾರೆ. ಆಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡುಬಂದಿದೆ. ಎಷ್ಟು ಕೂಗಿದರೂ ಪ್ರತಿಕ್ರಿಯೆ ನೀಡದಿದ್ದಾಗ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಆಗ ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಭದ್ರಾವತಿ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಫೆÇೀನ್ ಬಳಸಿದ್ದಕ್ಕೆ ತರಗತಿಯಿಂದ ಉಪನ್ಯಾಸಕರು ವಿದ್ಯಾರ್ಥಿಯನ್ನು ಹೊರಗೆ ಕಳುಹಿಸಿದ್ದು ತಪ್ಪೆ? ಇಂಥ ವಿಚಾರಕ್ಕೆ ಬೇಸರ ಪಟ್ಟುಕೊಂಡು ಬದುಕನ್ನೇ ಮುಗಿಸಿಕೊಳ್ಳುವಂಥದ್ದು ಏನಿದೆ? ತಂದೆ-ತಾಯಿ ಹಾಗೂ ತನ್ನನ್ನು ಇಷ್ಟಪಡುವವರೆಲ್ಲರನ್ನೂ ದುಃಖಕ್ಕೆ ದೂಡಿ, ಹೀಗೆ ಮಾಡಿದ್ದು ಸರಿಯೆ?


ಯುವಕ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟು ಕುಂಪಲ ಮೂರುಕಟ್ಟೆ ಸಮೀಪದ ಬಲ್ಯ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ನಿವೃತ್ತ ಉದ್ಯೋಗಿ ಶಿವರಾಮ ಎಂಬವರ ಪುತ್ರ ಧನಂಜಯ (30) ಆತ್ಮಹತ್ಯೆಗೈದಿದ್ದಾರೆ. ಬುಧವಾರ ನಸುಕಿನ ಜಾವ ಮನೆ ಹಿಂಬದಿಯಲ್ಲಿರುವ ಕೊಠಡಿಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ

ದೇರಳಕಟ್ಟೆಯ ಯೆನೆಪೆÇೀಯ ಆಸ್ಪತ್ರೆಯಲ್ಲಿ ಸೆಕ್ಯುರಿಟಿ  ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧನಂಜಯ್, ಆರ್ಥಿಕ ಅಡಚಣೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ. ವಾರದ ಹಿಂದಷ್ಟೇ ಸಹೋದರಿಯ ವಿವಾಹ ಸಮಾರಂಭ ಮನೆಯಲ್ಲಿ ನಡೆದಿದ್ದು, ಅದಕ್ಕಾಗಿ ಹಾಕಿದ್ದ ತೋರಣಗಳು ಇನ್ನೂ ಕಂಡು ಬಂದಿದೆ.