ಕಬಡ್ಡಿಯಲ್ಲಿ ಕೋಕೋ ಫ್ರೆಂಡ್ಸ್ ಕುಂಜತ್ತೂರು ತಂಡ ಪ್ರಥಮ

ಪ್ರಥಮ ಟ್ರೋಫಿ ಗೆದ್ದ ಕೋಕೋ ಫ್ರೆಂಡ್ಸ್ ಕುಂಜತ್ತೂರು ತಂಡ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸತತ ಕಳೆದ 30 ವರ್ಷಗಳಿಂದ ಪ್ರಯತ್ನ ನಡೆಸಿ ಅದರಲ್ಲಿ ಸಫಲತೆ ಕಂಡ ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಕುಂಜತ್ತೂರು ಇವರ ವತಿಯಿಂದ ಈ ಸಲವು ವಿಜೃಂಭಣೆಯ ಕಬಡ್ಡಿ ಪಂದ್ಯಾಟ ಜರುಗಿತು.
ಕುಂಜತ್ತೂರು ಗ್ರಾಮೀಣ ಪ್ರದೇಶದಲ್ಲಿ ಜರುಗಿದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ, ಕೇರಳ, ತಮಿಳ್ನಾಡು ಸೇರಿದಂತೆ ಹಲವು ರಾಜ್ಯಗಳ ಆಟಗಾರರನ್ನೊಳಗೊಂಡ 28 ತಂಡಗಳು ಸೆಣಸಾಡಿದವು. ರೋಮಾಂಚಕ ಪಂದ್ಯಾಟ ನೋಡಲು ಸಹಸ್ರಾರು ಕಬಡ್ಡಿ ಪ್ರೇಮಿಗಳು ಜಮಾಯಿಸಿದ್ದರು. ಭಾನುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ ತನಕ ನಡೆದ 28 ತಂಡಗಳ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಮೂಡುಬಿದಿರೆಯ ಆಟಗಾರನ್ನೊಳಗೊಂಡ ಕೋಕೋ ಫ್ರೆಂಡ್ಸ್ ಕುಂಜತ್ತೂರು ಪ್ರಥಮ ಸ್ಥಾನವನ್ನು ತನ್ನದಾಗಿಸಿ 25 ಸಾವಿರ ರೂ ನಗದನ್ನು ಪಡಕೊಂಡರು. ಧ್ವಿತೀಯ ಸ್ಥಾನವನ್ನು ಬೆಂಗಳೂರಿನ ಆಟಗಾರರನ್ನೊಳಗೊಂಡ ಶಾಸ್ತಾ ಕೃಪ ಮಂಜೇಶ್ವರ ಪಡಕೊಂಡು 15 ಸಾವಿರ ರೂ ನಗದನ್ನು ತನ್ನದಾಗಿಸಿದರು. ತೃತೀಯ ಸ್ಥಾನಕ್ಕೆ ದೇವಿ ನಗರ ತಲಪಾಡಿ ಅರ್ಹವಾಯಿತು. ಇವರಿಗೆ 10 ಸಾವಿರ ರೂ ನಗದನ್ನು ನೀಡಲಾಯಿತು.
ಕಬಡ್ಡಿ ಆಟವನ್ನು  ಕುಂಜತ್ತೂರು ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಈಗಾಗಲೇ ತಮ್ಮ ಪ್ರದೇಶದಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೂ ತಮ್ಮ ಯುವಕರನ್ನು ಕಳುಹಿಸುವಂತೆ ಮಾಡಿರುವುದು ಗಮನೀಯ.