ಕುಂಜತ್ತೂರು ಶಾಲೆ ವಿದ್ಯಾರ್ಥಿನಿಯರಿಗೆ ಕಾಮಣ್ಣರ ಕಿರುಕುಳ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿನಿಯರನ್ನು ಕೇಂದ್ರೀಕರಿಸಿ ಕಾಮಣ್ಣರ ಉಪಟಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಾಗಿ ದೂರುಗಳು ಕೇಳಿಬಂದಿವೆ.

ಸಂಜೆ ಶಾಲೆ ಬಿಡುವ ಸಂದರ್ಭದಲ್ಲಿ ಸುಮಾರು 8 ಧ್ವಿಚಕ್ರ ವಾಹನಗಳಲ್ಲಿ ಮೂರು ಮಂದಿ ಕುಳಿತು ಅಮಿತವೇಗದಲ್ಲಿ ಬೈಕ್ ಹಾಗೂ ಸ್ಕೂಟರುಗಳನ್ನು ಚಲಾಯಿಸುತ್ತಾ, ವಿದ್ಯಾರ್ಥಿನಿಯರಿಗೆ ಚೀಟಿಯಲ್ಲಿ ಮೊಬೈಲ್ ಸಂಖ್ಯೆ ಬರೆದು ಬೀಸಾಡುವುದು, ಅವರ ಫೋಟೋ ತೆಗೆಯುವುದು ಮಾತ್ರವಲ್ಲದೆ ಬಸ್ಸಿನ ನಿಲುಗಡೆ ತನಕ ತಲುಪುವವರೆಗೆ ಕೀಟಲೆ ನೀಡುತ್ತಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.  ಕೆಲ ಸ್ಕೂಟರ್ ಹಾಗೂ ಬೈಕುಗಳಿಗೆ ನೋಂದಾವಣೆಯೇ ಇಲ್ಲವೆನ್ನಲಾಗಿದೆ.  ಈ ದಂಡಪಿಂಡಗಳ ವಿರುದ್ಧ ಪೆÇಲೀಸರು ಮಫ್ತಿಯಲ್ಲಿ ಕಾರ್ಯಾಚರಿಸಿದರೆ ಮಾತ್ರ ಇದಕ್ಕೊಂದು ಕಡಿವಾಣ ಹಾಕಲು ಸಾಧ್ಯವೆಂದು ಊರವರು ಹೇಳುತ್ತಿದ್ದಾರೆ. ಇವರ ಉಪದ್ರವನ್ನು ಸಹಿಸದ ಊರವರು ಈಗಾಗಲೇ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.


ಇಬ್ಬರು ದನಗಳ್ಳರ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದನಕಳವು ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಠಾಣಾ ಪೊಲೀಸರು ಅಡ್ಡೂರಿನ ನಿವಾಸಿಗಳಾದ ಮುಸ್ತಾಫ (23) ಮತ್ತು ಅಬ್ದುಲ್ ಮಜೀದ್ (27) ಎಂಬವರನ್ನು ಬಂಧಿಸಿದ್ದಾರೆ. ದನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರೂ ತಲೆ ಮರೆಸಿಕೊಂಡಿದ್ದರು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.