ಬಾಲಕಿ ಅತ್ಯಾಚಾರ ಆರೋಪಿ ಸೆರೆ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಎಂಟು ವರ್ಷ ಪ್ರಾಯದ ಬಾಲಕಿ ಅತ್ಯಾಚಾರ ನಡೆಸಿದ ಆತಂಕಕಾರಿ ಘಟನೆ ಮೂರು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಬಿದ್ಕಲಕಟ್ಟೆ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂರನೇ ತರಗತಿಯ ಬಾಲಕಿ ಅಂಗಡಿಗೆ ಸಾಮಾನು ತರಲೆಂದು ಬಂದ ಸಂದರ್ಭದಲ್ಲಿ ಅಂಗಡಿ ಮಾಲಿಕ ಚಾಕಲೇಟು ಕೊಡ್ತೇನೆ ಒಳಗೆ ಬಾ ಎಂದು ಕರೆದು ಆಮಿಷ ತೋರಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಅತ್ಯಾಚಾರಕ್ಕೊಳಗಾಗಿರುವ ಬಾಲಕಿ ತಿಳಿಸಿದ್ದಾಳೆ.

ಬಿದ್ಕಲಕಟ್ಟೆಯಲ್ಲಿ ನೆಲೆಸಿರುವ ಮೂಲತಃ ತಮಿಳುನಾಡು ಮೂಲದ ಕಳೆದ ಏಳೆಂಟು ವರ್ಷದಿಂದ ಬಿದ್ಕಲಕಟ್ಟೆಯಲ್ಲಿ ವಾಸವಿರುವ ಕಾರ್ಮಿಕ ಕುಟುಂಬದ ಎಂಟು ವರ್ಷದ ಬಾಲಕಿ ಮೂರು ದಿನಗಳ ಹಿಂದೆ ಬಿದ್ಕಲಕಟ್ಟೆಯ ರಾಮದಾಸ್ ಎಂಬಾತನ ಅಂಗಡಿಗೆ ಸಾಮಾನು ತರಲೆಂದು ಹೋಗಿದ್ದಳು. ಈ ಸಂದರ್ಭ ಬಾಲಕಿಗೆ ಚಾಕಲೇಟ್ ಕೊಡುತ್ತೇನೆ ಎಂದು ಆಸೆ ತೋರಿಸಿ ಒಳಗೆ ಕರೆದುಕೊಂಡಿದ್ದ ಅಂಗಡಿ ಮಾಲಕ ರಾಮದಾಸ್ ಪ್ರಭು ಅಲ್ಲಿಯೇ ಅತ್ಯಾಚಾರ ನಡೆಸಿದ್ದಾನೆ. ನಿನಗೆ ದಿನಾ ಚಾಕಲೇಟ್ ಕೊಡ್ತೇನೆ ಯಾರಿಗೂ ಹೇಳಬೇಡ ಎಂದು ಹೇಳಿ ಆಕೆಯನ್ನು ನಂತರ ಮನೆಗೆ ಕಳುಹಿಸಿದ್ದ ಎನ್ನಲಾಗಿದೆ.

ಕಳೆದ ಮೂರು ದಿನಗಳಿಂದ ಬಾಲಕಿ ಮೈ ಹುಷಾರಿಲ್ಲ ಎಂದು ಮಲಗಿದ್ದಳೆನ್ನಲಾಗಿದೆ. ತಂದೆ ಅಲ್ಲಿಯೇ ಹಿಟಾಚಿಯೊಂದರಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು ತಾಯಿ ಮೂಗಿಯಾಗಿದ್ದಾಳೆ. ಹಾಗಾಗಿ ಪ್ರಕರಣ ನಡೆದು ಮೂರು ದಿನಗಳ ಬಳಿಕವೂ ತಿಳಿದಿರಲಿಲ್ಲ. ಆಕೆ ಏಳದೇ ಇದ್ದಾಗ ತಾಯಿ ಆಕೆಯ ಗುಪ್ತಾಂಗವನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಆಕೆಯನ್ನು ಸ್ಥಳೀಯ ಬಿದ್ಕಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಲಾಗಿದ್ದು, ಅಲ್ಲಿ ಮಗು ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೃಢೀಕರಿಸಿದ್ದಾರೆ. ನಂತರ ಸ್ಥಳೀಯರ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗೆಂದು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಲ್ಲಿ ಪರೀಕ್ಷಿಸಿದ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಮಣಿಪಾಲಕ್ಕೆ ದಾಖಲಿಸಲಾಗಿದೆ. ಈ ಕುರಿತು ಕೋಟ ಠಾಣೆ ಪೆÇಲೀಸರು ಫೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿ ರಾಮದಾಸ್ ಪ್ರಭುನನ್ನು ಬಂಧಿಸಲಾಗಿದೆ.