ಕುಂಬ್ಳೆಯ ಕೈಚಳಕ ಸ್ಮರಣಾರ್ಹ

ಫೀರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಎರಡನೇ ಇನ್ನಿಂಗ್ಸಿನಲ್ಲಿ ಎಲ್ಲ 10 ವಿಕೆಟ್ ಉರುಳಿಸಿ ಇತಿಹಾಸವನ್ನು ಸೃಷ್ಟಿಸಿ ವಿಜಯೋತ್ಸವ ಆಚರಿಸಿ ಫೆಬ್ರವರಿ 7ಕ್ಕೆ 18 ವರ್ಷಗಳು ಗತಿಸಿಹೋಗಿವೆ ಎಂದರೆ ರೋಮಾಂಚನವಾಗುತ್ತದೆ. ಕ್ರೀಡಾಪ್ರಿಯರಿಗೆ ಇದಕ್ಕಿಂತ ಮತ್ತೊಂದು ವಿಷಯ ಇದೆಯೇ ?
1999ರ ಟೆಸ್ಟ್ ಪಂದ್ಯದ ದಾಖಲೆಯಲ್ಲಿ ಇಂಗ್ಲೆಂಡಿನ ಜಿಮ್ ಲೇಕರ್ ಓಲ್ಡ್ ಟ್ರಾಫರ್ಡ್ ಟೆಸ್ಟ್‍ನಲ್ಲಿ ಆಸೀಸ್ ವಿರುದ್ಧ ಮಾಡಿದ್ದ ಸಾಧನೆಯನ್ನು ಭಾರತೀಯ ಕುಂಬ್ಳೆ ಅದೂ ಕರ್ನಾಟಕದ ಹುಡುಗ ಸರಿಗಟ್ಟಿರುವುದು ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹದ್ದು.
ಇವರ ಸಾಧನೆ ನಿಜಕ್ಕೂ ಹೆಮ್ಮೆಯನ್ನುಂಟು ಮಾಡಿದೆ. ಪ್ರಸ್ತುತ ಭಾರತದ ತಂಡದ ಕೋಚ್ ಆಗಿ ಮತ್ತೊಂದು ಜವಾಬ್ದಾರಿ ಸ್ಥಾನ ಪಡೆದಿದ್ದಾರೆ. ಇವರ ಸಾರಥ್ಯದಲ್ಲಿ ಭಾರತ ಕ್ರಿಕೆಟ್ ತಂಡ ಮತ್ತಷ್ಟು ದಾಖಲೆಗಳನ್ನು ಸೃಷ್ಟಿಸಲಿ. ಕುಂಬ್ಳೆಯಂತಹ ಇಂತಹ ಸಾಧನೆ ಸದಾ ನೆನಪಿನುಲ್ಲುಳಿಯುವಂತೆ ಯಾವುದಾದರೂ ಪ್ರಶಸ್ತಿ ಸ್ಥಾಪಿಸಿ ಕ್ರೀಡಾಪ್ರತಿಭೆಗಳಿಗೆ ನೀಡಲಿ. ಈ ಬಗ್ಗೆ ಸಂಬಂಧಿಸಿದವರು ಗಮನಿಸಲಿ

  • ಮೋಹನ್ ವಿ ಕರ್ಕೇರ  ಸಸಿಹಿತ್ಲು