ಠಾಣೆಯ ಜಾಗದಲ್ಲೇ ತರಕಾರಿ ಬೆಳೆಸಿ ಮಾದರಿಯಾದ ಕುಂಬಳೆ ಪೆÇಲೀಸರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕುಂಬಳೆ ಪೆÇಲೀಸರು ಠಾಣೆಯ ಜಾಗದಲ್ಲಿ ತರಕಾರಿಗಳನ್ನು ಬೆಳೆಸಿ ಮಾದರಿಯಾಗುತ್ತಿದ್ದಾರೆ. ಪಡವಲಕಾಯಿಯಿಂದ ಆರಂಭಿಸಿ ಹಸಿಮೆಣಸಿನ ತನಕ ತರಕಾರಿಗಳು ಪೆÇಲೀಸರ ಸಂರಕ್ಷಣೆಯಿಂದ ಬೆಳೆದು ನಿಂತಿದೆ.

ಠಾಣೆಯ ಮುಂಭಾಗದಲ್ಲಿ 3 ತಿಂಗಳಿಗೆ ಮೊದಲು ಹಸಿರು ಕೇರಳ ಯೋಜನೆಯ ಅಂಗವಾಗಿ ತರಕಾರಿ ಬೆಳೆಸಲಾಗಿತ್ತು. ಕರ್ತವ್ಯ ಮುಗಿಸಿ ಸಿಗುವ ಸಮಯಗಳಲ್ಲಿ ಕೃಷಿ ಭವನಕ್ಕೆ ತೆರಳಿ ಅಲ್ಲಿಂದ ಸಿಗುವ ತರಕಾರಿ ಬೀಜಗಳನ್ನು ತಂದು ಠಾಣೆಯ ಜಾಗದಲ್ಲಿ ಹಾಕಿ ತರಕಾರಿ ಬೆಳೆಸುವ ಮೂಲಕ ಇಲ್ಲಿನ ಪೆÇಲೀಸರು ಕೃಷಿಯಲ್ಲಿ ಇತರರಿಗೆ ಮಾದರಿಯಾಗುತ್ತಿದ್ದಾರೆ.

ಜೈವಿಕ ಗೊಬ್ಬರವನ್ನಷ್ಟೇ ಉಪಯೋಗಿಸಿ ಕೃಷಿ ಮಾಡಲಾಗಿದೆ. ನುಗ್ಗೆಕಾಯಿ, ಬೆಂಡೆಕಾಯಿ, ಪಡವಲಕಾಯಿ, ಹೀರೆಕಾಯಿ, ತೊಂಡೆಕಾಯಿ, ಸೋರೆಕಾಯಿ, ಸೌತೆಕಾಯಿ, ಕೆಂಪುಮೆಣಸು, ಹಸಿಮೆಣಸು ಸೇರಿದಂತೆ ವಿವಿಧ ರೀತಿಯ ತರಕಾರಿಗಳು ಕರಾವಳಿ ಪೆÇಲೀಸ್ ಠಾಣೆಯ ಮುಂಭಾಗದಲ್ಲಿ ಬೆಳೆದು ನಿಂತಿದೆ. ಠಾಣೆಯ ಅಡಿಷನಲ್ ಎಸ್ಸೈ ಶಶಿ ಎನ್ನುವವರ ಶ್ರಮ ಹಾಗೂ ಉಳಿದ ಪೆÇಲೀಸರು ಅದಕ್ಕೆ ಕೈ ಜೋಡಿಸಿದ ಫಲವಾಗಿ ಇಷ್ಟೊಂದು ತರಕಾರಿಗಳನ್ನು ಬೆಳೆಸಲು ಸಾಧ್ಯವಾಗಿದೆ ಎಂದು ಠಾಣಾಧಿಕಾರಿ ಹೇಳುತ್ತಿದ್ದಾರೆ.

ಠಾಣೆಯಲ್ಲಿರುವ ಪೆÇಲೀಸರ ಸ್ವಂತ ಉಪಯೋಗಕ್ಕೆ ಬಳಸಿ ಉಳಿದ ತರಕಾರಿಗಳನ್ನು ಠಾಣಾ ವ್ಯಾಪ್ತಿಯಲ್ಲಿ ಹಾದು ಹೋಗುವ ಜನರಿಗೆ ಪೆÇಲೀಸರು ಕೊಡುವುದರ ಜೊತೆಗೆ ಸ್ವಂತ ಮನೆಯ ಜಾಗದಲ್ಲಿ ಜೈವಿಕ ಗೊಬ್ಬರವನ್ನು ಉಪಯೋಗಿಸಿ ತರಕಾರಿ ಬೆಳೆಸುವಂತೆ ಪ್ರೇರಣೆ ನೀಡುತಿದ್ದಾರೆ.

ಅಂತೂ ಪೆÇಲೀಸರು ತರಕಾರಿ ಬೆಳೆಸಲು ತೋರಿಸಿದ ಆಸಕ್ತಿಯನ್ನು ಕಂಡು ಸುತ್ತಮುತ್ತಲಿನ ಮನೆಯವರು ಕೂಡಾ ತರಕಾರಿ ಬೆಳೆಸಲು ಆರಂಭಿಸಿದ್ದಾರೆ.

 

 

 

LEAVE A REPLY