ಕೂಳೂರಿನ ಬಾರುಗಳಿಗೆ ಪಾರ್ಕಿಂಗ್ ಮಾಡಲು ಹೆದ್ದಾರಿ ರಸ್ತೆಯೇ ಬೇಕೇ ?

ಕೂಳೂರು ಪೇಟೆಯಲ್ಲಿ ಅದೆಷ್ಟೋ ಸಮುಯದಿಂದ ವಕ್ಕರಿಸಿರುವ ಬಾರ್ ಎಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪಿಗೆ ಬರುವ ಗಿರಾಕಿಗಳಿಗೆ ವಾಹನ ಪಾರ್ಕ್ ಮಾಡಲು ಹೆದ್ದಾರಿ ರಸ್ತೆಯೇ ಬೇಕಾಗಿದೆಯೇ   ಈ ಬಾರ್ ನಡೆಸುವವರಿಗೆ ತಮ್ಮ ಗಿರಾಕಿಗಳಿಗೆ ವಾಹನ ನಿಲ್ಲಿಸಲು ವ್ಯವಸ್ಥೆ ಕಲ್ಪಿ¸ಲು ಏನು ಕಷ್ಟ   ಗಿರಾಕಿಗಳಿಗೆ ಕಳಪೆ ಮದ್ಯ ವಿತರಿಸಿ ಹೆಚ್ಚು ದರ ಹಾಕಿ ಮಂಡೆ ಬೋಳಿಸುವ ಈ ಬಾರಿನವರಿಗೆ ಗಿರಾಕಿಗಳಿಗೆ ವಾಹನ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಲು ಏನಡ್ಡಿಯಾಗಿದೆ
ಮೊದಲೇ ಕೂಳೂರಿನ ಹೆದ್ದಾರಿ ಕಿರಿದಾಗಿದ್ದು ಈ ಬಾರ್ ಎದುರುಗಡೆ ಕತ್ತಲಾಗುತ್ತಿದ್ದಂತೆ ಹೆದ್ದಾರಿ ಉದ್ದಕ್ಕೂ ಸಾಲಾಗಿ ವಾಹನಗಳನ್ನು ನಿಲ್ಲಿಸಿಬಿಟ್ಟರೆ ಪಾದಚಾರಿಗಳು ಹೆದ್ದಾರಿ ಮಧ್ಯೆ ನಡೆಯಬೇಕಾ   ಇಲ್ಲಿ ಫುಟ್ಪಾತುಗಳು ಬಾರಿನವರ ಗಿರಾಕಿಗಳಿಗೆ ಮೀಸಲಾದರೆ ಹೆದ್ದಾರಿಯಲ್ಲಿ ಹೋಗುವ ವಾಹನಗಳ ಗತಿ ಏನಾದೀತು   ಬಾರಿನವರು ಯಾಕೆ ಈ ರೀತಿ ಉಪದ್ರ ಕೊಡುತ್ತಿದ್ದಾರೆ   ಪಕ್ಕದಲ್ಲೇ ಲಾ ಎಂಡ್ ಆರ್ಡರ್ ನಿಯಂತ್ರಣ ಮಾಡುವ ಪೊಲೀಸರು ಈ ದೃಶ್ಯವನ್ನು ದಿನಾ ನೋಡಿ ಅಸಹಾಯಕರಂತೆ ಇದ್ದಾರೆ ವಿನಃ ವಾರದಲ್ಲಿ ಎರಡ್ಮೂರು ಬಾರಿ ದಾಳಿ ನಡೆಸಿ ಬೇಕಾಬಿಟ್ಟಿ ವಾಹನ ನಿಲ್ಲಿಸುವವರಿಗೆ ದಿನ ಬಿಡದೇ ದಂಡ ಹಾಕಿದರೆ ಆಟೋಮ್ಯಾಟಿಕ್ ಹೆದ್ದಾರಿ ಬದಿ ವಾಹನ ನಿಲ್ಲಿಸುವುದನ್ನು ನಿಲ್ಲಿಸುತ್ತಾರೆ  ಹಾಗಂತ ಬಾರಿನವರಿಗೆ ಗಿರಾಕಿಗಳು ಬೇಕಾದರೆ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಿ  ಅದು ಸಾಧ್ಯವಿಲ್ಲವೆಂದಾದರೆ ಬಾರ್ ಬಂದ್ ಮಾಡಿ ಮನೆಗೆ ನಡೆಯಲಿ

  • ಕೆ ಧನಂಜಯ ಕೋಟ್ಯಾನ್  ಬೆಂಗ್ರೆ ಕೂಳೂರು