ಕುಡ್ಲದಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಕಲ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರಾವಳಿ ನಗರ ಮಂಗಳೂರು ಹೊಸ ವರ್ಷದ ಸ್ವಾಗತದ ಭರದ ಸಿದ್ಧತೆಯಲ್ಲಿದೆ. ಬಗೆಬಗೆಯ ಖಾದ್ಯ, ವಿನೋದ, ಮೋಜು ಮಸ್ತಿ ಸೇರಿದಂತೆ ನಗರಕ್ಕೆ ನಗರವೇ ಹೊಸ ವರ್ಷದ ಸ್ವಾಗತದ ನಿರೀಕ್ಷೆಯಲ್ಲಿದೆ. ನಗರದ ಹೆಚ್ಚಿನ ಹೋಟೆಲುಗಳು, ಪ್ರಮುಖ ಕ್ಲಬ್ಬುಗಳು ಸುಪ್ರಸಿದ್ದ ಡಿಜೆಗಳೊಂದಿಗೆ ಖಾದ್ಯ ತಿನಿಸು ಮತ್ತು ಡ್ಯಾನ್ಸ್, ಡಿಸ್ಕೋಗಳೊಂದಿಗೆ ಹೊಸ ವರ್ಷ ಪಾದಾರ್ಪಣೆಗೆ ನಿರ್ಧರಿಸಿವೆ.

ಇದೇ ವೇಳೆ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್ ಬೈಕಂಪಾಡಿ, ಪಣಂಬೂರು ಬೀಚಿನಲ್ಲಿ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ವೃತ್ತಿಪರ ಹಾಡುಗಾರರಿಂದ ಸಂಗೀತ ಮತ್ತು ಮನೋರಂಜನಾ ಕಾರ್ಯಕ್ರಮಗಳು, ಆಟೋಟಗಳು, ಸ್ಥಳೀಯ ಬ್ಯಾಂಡ್ ವಾದ್ಯಗಳು ಮತ್ತು ಆಹಾರೋತ್ಸವ ನಡೆಯಲಿದೆ. ವಿವಿಧ ರೀತಿಯ ಆಹಾರಗಳು ಲಭ್ಯವಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಗಾಳಿಪಟ ಹಾರಾಟದ ಮನೋರಂಜನೆಯಿದೆ. ವಿಶೇಷ ಆಕರ್ಷಣೆಯಾಗಿ ಸೆಪ್ಟೆಂಬರ್ ತಿಂಗಳಲ್ಲಿ ಫ್ರಾನ್ಸ್ ಡಿಪ್ಪೀ ಬೀಚಲ್ಲಿ 19ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪ್ರಜ್ವಲಿಸಿದ ಟೀಮ್ ಮಂಗಳೂರು ತಂಡದ `ದಂಪತಿ’ ಗಾಳಿಪಟ ಪಣಂಬೂರು ಬೀಚಲ್ಲಿ ಹಾರಾಡಲಿದೆ.

ವಿವಿಧೆಡೆಯ ಕಾರ್ಯಕ್ರಮಗಳು

ಬೋಳಾರ್ ಸಿಟಿ ಬೀಚಿನಲ್ಲಿ ರಿಫ್ಲೆಕ್ಷನ್ಸ್, ನವಭಾರತ ಸರ್ಕಲ್ ಓಸಿಯನ್ ಪರ್ಲಿನಲ್ಲಿ ರೆಟ್ರೋ ಟು ಮೆಟ್ರೊ, ಫಳ್ನೀರ್ ಮೋತಿಮಹಲಿನಲ್ಲಿ ಗಾಲ ನ್ಯೂ ಇಯರ್ಸ್ ಇವ್, ಬೋಂದೇಲಿನ 2 ಎಕ್ರೆಸಿನಲ್ಲಿ ಎನ್ ವೈ ಇ 2ಕೆ17,

ಬೋಂದೇಲ್ ಮಂಗಳೂರು ಹಿಲ್ಸ್ ಹವ್ಕ್ ಐಸಿನಲ್ಲಿ ಹಿಲ್ ಟಾಪ್ 2017, ಮಣಿಪಾಲ ಝೀಲ್ ರೂಫ್ ಟಾಪ್ ಬಾರ್ & ಗ್ರಿಲಿನಲ್ಲಿ ನ್ಯೂ ಇಯರ್ ಕೌಂಟ್ ಡೌನ್ 2017, ಸುಲ್ತಾನ್ ಬತ್ತೇರಿ ಕುಡ್ಲ ಕುದ್ರು ಹವಾನ ಐಲ್ಯಾಂಡಲ್ಲಿ ಬೆನಿಫಿಸಿಯಾ 2.0, ಭಾರತ್ ಮಾಲ್ ಸ್ಪಿಂಡ್ರಿಫ್ಟಿನಲ್ಲಿ ನ್ಯೂ ಇಯರ್ 2017, ಮಣಿಪಾಲ್ ಸ್ಕೈ ಲಾಂಗಿನಲ್ಲಿ ಫಸ್ಟ್ ಕಿಸ್ಸ್ ಆಫ್ ಇಯರ್, ಸುರತ್ಕಲ್ ಮುಕ್ಕಾದಲ್ಲಿ ಬಬ್ಲ್ ಬೈಟ್, ಪಣಂಬೂರು ಗೋಲ್ಡನ್ ರೀಫ್ ಬೀಚ್ ರೆಸ್ಟಾರೆಂಟಿನಲ್ಲಿ ಸೈಲೆಂಟ್ ಡಿಸ್ಕೋ, ಸುರತ್ಕಲ್ ಮುಕ್ಕಾದಲ್ಲಿ ನ್ಯೂ ಇಯರ್ ಬ್ಯಾಷ್ 17, ಗೋಲ್ಡ್ ಪಿಂಚ್ ಸಿಲ್ವರ್ ಬಿಲ್ಸಿನಲ್ಲಿ 2017 ಹ್ಯಾಪೀ ನ್ಯೂ ಇಯರ್ ಪಾರ್ಟಿ, ಉಳ್ಳಾಲ ಸಮ್ಮರ್ ಸ್ಯಾಂಡ್ಸಿನಲ್ಲಿ ಬೀಚ್ 2017 ಥ್ರಾಬ್ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.