ಕುಡ್ಲ ಎಕ್ಸ್ಪ್ರೆಸ್ : ರೈಲ್ವೇ ಅಫಿದವಿತ್ತಿಗೆ ಆಕ್ಷೇಪ ಸಲ್ಲಿಸಲು ಉಡುಪಿ ಯಾತ್ರಿ ಸಂಘಕ್ಕೆ ಹೈ ಕೋರ್ಟ್ ಅನುಮತಿ

ಸಾಂದರ್ಭಿಕ ಚಿತ್ರ

ಬೆಂಗಳೂರು : `ಕುಡ್ಲ ಎಕ್ಸ್‍ಪ್ರೆಸ್’ ಆರಂಭಿಸುವ ಕುರಿತು ರೈಲ್ವೇಯ ಅಫಿದವಿತ್ತಿಗೆ ಆಕ್ಷೇಪ ಸಲ್ಲಿಸಲು ರಾಜ್ಯ ಹೈಕೋರ್ಟಿನ ವಿಭಾಗೀಯ ಪೀಠವೊಂದು ಉಡುಪಿ ರೈಲು ಯಾತ್ರಿ ಸಂಘಕ್ಕೆ ಸೋಮವಾರ ಅನುಮತಿ ನೀಡಿದೆ.

ಸಂಘವು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಮಾರ್ಚ್ 31ರೊಳಗೆ ಬೆಂಗಳೂರು ಸಿಟಿ ಮತ್ತು ಮಂಗಳೂರು ಸೆಂಟ್ರಲ್ ಮಧ್ಯೆ ರೈಲನ್ನು ಆರಂಭಿಸುವುದಾಗಿ ನೈರುತ್ಯ ರೈಲ್ವೇ ಮಾರ್ಚ್ 7ರಂದು ಕೋರ್ಟಿಗೆ ಮಾಹಿತಿ ನೀಡಿತ್ತು.

ಆದರೆ ನೈರುತ್ಯ ರೈಲ್ವೇಯು ಈಗಾಗಲೇ ಆರಂಭಿಸಿರುವ ರೈಲು (ಸಂಖ್ಯೆ 16575/576) ಭಿನ್ನ ರೂಟ್ ಮತ್ತು ಭಿನ್ನ ನಿಲ್ದಾಣದ (ಯಶವಂತಪುರ-ಕಂಕನಾಡಿ) ಮಧ್ಯೆ ಆರಂಭಿಸಿದೆ ಎಂದು ಸಂಘ ನ್ಯಾಯಾಲಯಕ್ಕೆ ದೂರಿದೆ.