ಮಂಗಳೂರು ಬಳ್ಳಾರಿ ವೋಲ್ವೋ ಬಸ್

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜ 16ರಿಂದ ಮಂಗಳೂರು ಬಳ್ಳಾರಿ ವಯಾ ಉಡುಪಿ, ಮಣಿಪಾಲ, ಕುಂದಾಪುರ, ಶಿವಮೊಗ್ಗ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ ಮಾರ್ಗದಲ್ಲಿ ವೋಲ್ವೋ ಸಾರಿಗೆಯನ್ನು ನೂತನ ವೇಳಾಪಟ್ಟಿಯಂತೆ ಪ್ರಾರಂಭಿಸಲಾಗಿದೆ.
ಮಂಗಳೂರಿನಿಂದ ಪ್ರತೀ ದಿನ ರಾತ್ರಿ 8 ಗಂಟೆಗೆ ಹೊರಡುವ ಬಸ್ ಉಡುಪಿ (9 ಗಂಟೆ), ಮಣಿಪಾಲ (9.10), ಕುಂದಾಪುರ (10) ಮೂಲಕ ಬೆಳಿಗ್ಗೆ 6 ಗಂಟೆಗೆ ಬಳ್ಳಾರಿ ತಲುಪಲಿದೆ.
ಬಳ್ಳಾರಿಯಿಂದ ಪ್ರತೀ ದಿನ ಸಂಜೆ 7 ಗಂಟೆಗೆ ಹೊರಟು, ಬೆಳಿಗ್ಗೆ 3.55ಕ್ಕೆ ಉಡುಪಿ, 5.15ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರು-ಬಳ್ಳಾರಿ ಪ್ರಯಾಣ ದರ ರೂ 580 ಆಗಿದೆ. ಈ ಸಾರಿಗೆಗೆ ಆನ್ ಲೈನ್ ಮುಂಗಡ ಟಿಕೆಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.