ಬೇಡಿಕೆ ಆಗ್ರಹಿಸಿ ಕೆ ಎಸ್ ಇ ಬಿ ನೌಕರರಿಂದ ಪ್ರತಿಭಟನೆ

ಕೆ ಎಸ್ ಇ ಬಿ ನೌಕರರಿಂದ ಧರಣಿ ನಡೆಯಿತು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಿವಿಧ ಬೇಡಿಕೆ ಒತ್ತಾಯಿಸಿ ಕೇರಳ ಇಲೆಕ್ಟ್ರಿಸಿಟಿ ಕೋ ಫೆಡರೇಶನ್ ನೇತೃತ್ವದಲ್ಲಿ ಕಾಸರಗೋಡು ವಿದ್ಯುತ್ ಸರ್ಕಲ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು.

ವಿದ್ಯುತ್ ಇಲಾಖೆಯಲ್ಲಿ ಹುದ್ದೆಗಳನ್ನು ಕಡಿತಗೊಳಿಸುವ ನಿಲುವನ್ನು ಕೈ ಬಿಡಬೇಕು, ಹೊಸತಾದ ನೌಕರರನ್ನು ತಕ್ಷಣ ನೇಮಕ ಗೊಳಿಸಬೇಕು. ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಧರಣಿ ಹಮ್ಮಿಕೊಳ್ಳಲಾಗಿತ್ತು. ಕೆ ಪಿ ಸಿ ಸಿ ಸದಸ್ಯ ಪಿ ಎ ಅಶ್ರಫ್ ಅಲಿ ಮಾತನಾಡಿ, “ನ್ಯಾಯಯುತವಾದ ಬೇಡಿಕೆಗಳನ್ನು ತುರ್ತಾಗಿ ಸರಕಾರ ಅಂಗೀಕರಿಸಬೇಕಾಗಿದೆ. ಎಲ್ಲವನ್ನು ಸರಿ ಮಾಡುವುದಾಗಿ ವಾಗ್ದಾನ ನೀಡಿ ಅಧಿಕಾರಕ್ಕೇರಿದ ಎಡರಂಗ ಸರಕಾರ ಈಗ ಏನನ್ನು ಸರಿ ಮಾಡಿದೆ” ಎಂದು ಪ್ರಶ್ನಿಸಿದರು. ನೇತಾರರ ಸಹಿತ ಹಲವಾರು ಮಂದಿ ಧರಣಿಯಲ್ಲಿ ಪಾಲ್ಗೊಂಡರು.