ಕೃತಿ ಮೈತುಂಬಾ 2000ರೂ ನೋಟುಗಳು !

ಹೀರೋಯಿನ್ನುಗಳಿಗೆ ಥರಾವರಿ ಡ್ರೆಸ್ ಮಾಡಿಕೊಂಡು ಮೀಡಿಯಾ ಪಬ್ಲಿಸಿಟಿ ಪಡೆಯುವುದೆಂದರೆ ಎಲ್ಲಿಲ್ಲದ ಆಸೆ. ಕೆಲವರು ತಮ್ಮ ಡ್ರೆಸ್ಸಿನಲ್ಲಿ ಪ್ರಾಣಿ ಚಿತ್ರವೋ ಇನ್ಯಾವುದೋ ಗಮನ ಸೆಳೆಯುವ ಚಿತ್ರಗಳನ್ನು ಹಾಕಿಕೊಳ್ಳುವುದು ಕಾಮನ್. ಕೆಲವು ಸಮಯದ ಹಿಂದೆ ರಾಖಿಸಾವಂತ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚಿತ್ರವಿರುವ ಟೀ ಶರ್ಟ್ ಧರಿಸಿ ಕೇಸನ್ನೂ ಆಹ್ವಾನಿಸಿಕೊಂಡಿದ್ದಳು. ಈಗ ಕೃತಿ ಸನನ್ ಈಗ ಸ್ಪೆಷಲ್ ಡ್ರೆಸ್ ಧರಿಸಿ ಇಂಟರ್ನೆಟ್ಟಿನಲ್ಲಿ ವೈರಲ್ ಆಗಿದ್ದಾಳೆ.
ಈಗ ನೋಟು ಬ್ಯಾನಿನಿಂದಾಗಿ ಹಣಕ್ಕಾಗಿ ಜನರು ಬ್ಯಾಂಕ್ ಹಾಗೂ ಎಟಿಎಂ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರೆ ಕೃತಿ 2000 ನೋಟು ಬಳಸಿ ವಿನ್ಯಾಸ ಮಾಡಿರುವ ಗೌನು ಧರಿಸಿರುವ ಕೃತಿ ಸನನ್ ಫೆÇೀಟೋ ಈಗ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದೆ.
ಆದರೆ ಇದು ನಿಜವಾದ ಫೋಟೋ ಅಲ್ಲ, ಯಾರೋ ಇದನ್ನು ಮಾರ್ಫಿಂಗ್ ಮಾಡಿದ್ದಾರೆ. ನಿಜವೆಂದರೆ ಕೃತಿ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದು ಬಿಳಿ ಗೌನ್. ಯಾರೋ ಸ್ವಲ್ಪ ತಲೆ ಖರ್ಚು ಮಾಡಿ ಫೋಟೋಶಾಪಿನಲ್ಲಿ ಈ ರೀತಿ ತರ್ಲೆ ಕೆಲಸ ಮಾಡಿದ್ದಾರೆ.