ಕೃಷ್ಣವೇಷಧಾರಿ ಬಾಲಕನ ಕಟ್ಟಿಹಾಕಿ ಮೆರವಣಿಗೆ…!

ಕಾಸರಗೋಡು : ಕೇರಳದ ಕಣ್ಣೂರಿನಲ್ಲಿ ನಡೆದ ಕೃಷ್ಣಜನ್ಮಾಷ್ಟಮಿ ಮೆರವಣಿಗೆ ಸಂದರ್ಭದಲ್ಲಿ ಮೂರು ವರ್ಷದ ಬಾಲಕನೊಬ್ಬನನ್ನು ಬೃಹದಾಕಾರದ ಅಶ್ವತ್ಥ ಎಲೆಯಲ್ಲಿ ಕೃಷ್ಣನ ಪ್ರತಿರೂಪ ಮಾಡಿಕೊಂಡು ಹೋಗಿರುವುದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಬೃಹದಾಕಾರದ ಎಲೆ ಆಕೃತಿಯ ಬೋರ್ಡಿನ ಮೇಲೆ ಬಾಲಕ ಕೃಷ್ಣನನ್ನು ಕಟ್ಟಿಹಾಕಲಾಗಿತ್ತು. ಈ ಬಾಲಕ ಸೂರ್ಯನ ಬಿಸಿಲಿಗೆ ಸುಮಾರು ಎರಡು ಗಂಟೆಗಳ ಕಾಲ ಆತ ಒಣಗಿದ್ದ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ರಾಜ್ಯ ಮಕ್ಕಳ ಹಕ್ಕುಗಳ ಸಮಿತಿಯು ಈ ಬಗ್ಗೆ ಸಂಘಟಕರಿಂದ ವಿವರವಾದ ವರದಿ ಕೇಳಿದೆ.