ಕೃಷ್ಣಾಪುರ ಯುವಕ ನೀರುಪಾಲು

ವರ್ಷದ ಕಡೆದಿನ ಯುವಕನ ಬಾಳಿಗೆ ಕೊನೆದಿನವಾಯಿತು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುರತ್ಕಲ್ ಸಮೀಪದ ಸೂರಿಂಜೆ ನಂದಿನಿ ನದಿಯಲ್ಲಿ ಶನಿವಾರ ಮಧ್ಯಾಹ್ನ ಸ್ನಾನ ಮಾಡಲು ತೆರಳಿದ್ದ 6 ಜನರ ಪೈಕಿ ಒಬ್ಬ ನೀರುಪಾಲಾಗಿದ್ದಾನೆ.

nizamuddeen

ಮೃತನನ್ನು ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ನಿಝಾಮುದ್ದೀನ್ (21) ಎಂದು ಗುರುತಿಸಲಾಗಿದೆ. ನಿಝಾಮುದ್ದೀನ್ ತನ್ನ ಸ್ನೇಹಿತರಾದ ನಾಝಿಮ್, ನದೀಮ್, ಅಶ್ಪಾಕ್, ಸುಹೈಲ್, ಜಬ್ಬಾರ್ ಎಂಬವರೊಂದಿಗೆ ಶನಿವಾರ ಮಧ್ಯಾಹ್ನ 3ರ ಸುಮಾರಿಗೆ ಸೂರಿಂಜೆ ಕೋಟ್ಯಾರ್ ಎಂಬಲ್ಲಿನ ನಂದಿನಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು.

ಇವರ ಪೈಕಿ ನಾಲ್ಕು ಮಂದಿ ಸ್ನಾನ ಮಾಡಲು ನೀರಿಗೆ ಇಳಿದಿದ್ದು, ಇಬ್ಬರು ಬಂಡೆಯ ಮೇಲೆ ಕುಳಿತ್ತಿದ್ದರು. ಆ ಪೈಕಿ ನಿಝಾಮುದ್ದೀನ್ ನೀರಿನಲ್ಲಿ ಆಟವಾಡುತ್ತಾ ಮುಂದೆ ಚಲಿಸಿದಾಗ ಅಳವಿದ್ದ ಜಾಗದಲ್ಲಿ ಆಯ ತಪ್ಪಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮುಳುಗುವ ವೇಳೆ ರಕ್ಷಣೆಗಾಗಿ ತನ್ನ ಸ್ನೇಹಿತರನ್ನು ಕರೆದಿದ್ದ. ಆದರೆ, ಈಜು ಬಾರದ ನಿಝಾಮುದ್ದೀನ್ ನೀರಿನಲ್ಲಿ ಮುಳುಗುವುದನ್ನು ಕಂಡು ಸ್ನೇಹಿತರು ಸ್ಥಳೀಯರನ್ನು ಕರೆದು ರಕ್ಷಣೆಗೆ ಮುಂದಾದರಾದರೂ ಅಷ್ಟರಲ್ಲಾಗಲೇ ನಿಝಾಮುದ್ದೀನ್ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

ಸಂಜೆ 7ರ ಸುಮಾರಿಗೆ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ತಣ್ಣಿರುಬಾವಿಯ ಮುಳುಗು ತಜ್ಞರ ತಂಡದ ಸದಸ್ಯರು ನೀರಿನಲ್ಲಿ ಮುಳುಗಿದ್ದ ನಿಝಾಮುದ್ದೀನ್ ಶವವನ್ನು ಮೇಲಕ್ಕೆತ್ತಿದ್ದಾರೆ.

ಸುರತ್ಕಲ್ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.