ಕೃಷ್ಣ, ಶರೀಫ್, ಪೂಜಾರಿಗೆ ಪ್ರಧಾನಿಯಾಗುವ ಆಸೆಯಿತ್ತೆ

 

Janardhan_Poojary_1

Krishna quit congressJafer sharif

ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿ ಹೆಸರು ಮಾಡಿರುವ ಎಸ್ ಎಂ ಕೃಷ್ಣ, ಜಾಫರ್ ಷರೀಪ್, ಜನಾರ್ದನ ಪೂಜಾರಿಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದಲ್ಲಿದ್ದಾಗ ಪ್ರಧಾನಿಯಾಗುವ ಆಸೆಯಿತ್ತೇ ? ಹೀಗೊಂದು ಮಾತುಗಳು ಕೇಳಿ ಬರುತ್ತಿದೆ. ಪಕ್ಷದ ಕಾರ್ಯಕರ್ತರಲ್ಲಿ ಇತ್ತೀಚೆಗೆ ಈ ತ್ರಿಮೂರ್ತಿಗಳು ತಮ್ಮನ್ನು ಕಟ್ಟಿ ಬೆಳೆಸಿದ ಪಕ್ಷದ ನಾಯಕರನ್ನು ಟೀಕೆ ಮಾಡುತ್ತಿರುವ ರೀತಿಗಳು ಜಾತ್ಯತೀತ ತತ್ವ ಸಿದ್ಧಾಂತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೂಲಕ ಈ ಮೂವರು ರಾಜಕಾರಣಕ್ಕೆ ಪ್ರವೇಶ ಮಾಡಿ ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟದವರೆಗಿನ ವಿವಿಧ ಹುದ್ದೆ, ತಮ್ಮ ಗೌರವಕ್ಕೆ ತಕ್ಕ ಮುಖ್ಯಮಂತ್ರಿ, ರೈಲ್ವೇ, ವಿತ್ತ ಖಾತೆಯಂತಹ, ಸ್ಥಾನಮಾನ. ತಮ್ಮ ಬಂಧು ಬಳಗ, ಬೇಕಾದವರಿಗೆ ಸರಕಾರದ ಮಟ್ಟದಿಂದ ಗುತ್ತಿಗೆ ಸರಕಾರಿ ಸೌಲಭ್ಯವನ್ನು ಪಡೆದು ತನ್ನ ಎಲ್ಲಾ ಆಸೆಗಳನ್ನು ಕಾಂಗ್ರೆಸ್ ಪಕ್ಷದಲ್ಲಿ ಈಡೇರಿದ ಮೇಲೆ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪಕ್ಷ ಕಡೆಗಣಿಸಿದೆ ಎಂದರೆ ಯಾರೂ ನಂಬಲು ಸಾಧ್ಯವೇ

ಪಕ್ಷ. ಸಂಘಟನೆ, ಸಭೆ ಚಟುವಟಿಕೆಗೆ ತಪ್ಪಿಸಿಕೊಂಡು ಪಕ್ಷ ವಿಚಾ
ರದಲ್ಲಿ ನಾಯಕರೊಂದಿಗೆ ಚರ್ಚಿಸದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಪಕ್ಷದ ವಿರುದ್ಧ
ವೇ ಬಾಯಿಗೆ ಬಂದಂತೆ ಒದರುತ್ತಿರುವುದನ್ನು ಕಂಡಾಗ ಇವರುಗಳು ಪಕ್ಷದಲ್ಲಿ ಇದರೆಷ್ಟು
ಇಲ್ಲದಿದ್ದರೆಷ್ಟು ಎಂಬಂತಾಗಿದೆ. ಕಾಂಗ್ರೆಸ್ ಪಕ್ಷ ಇಂಥವರಿಗೆ ಇಷ್ಟೆಲ್ಲ ಅವಕಾಶ ನೀಡಿರುವುದು. ಕಾಂಗ್ರೆಸ್ ಪಕ್ಷಕ್ಕೆ ಮುಳುವಾಯಿತೇ ? ಬಾಕಿ ಯಾವುದೇ ಪಕ್ಷ ಇಷ್ಟೊಂದು ಅವಕಾಶ ನೀಡುತ್ತಿರಲಿಲ್ಲ. ಇನ್ನಾದರೂ ಕಾಂಗ್ರೆಸ್ ಪಕ್ಷ ಇಂತಹ ತಪ್ಪುಗಳನ್ನು ಮಾಡದಿರಲಿ. ಯಾವುದೇ ನಾಯಕ ಪಕ್ಷಕ್ಕಿಂತ ದೊಡ್ಡವನಲ್ಲ. ಈ ಕೂಡಲೇ ಇಂತಹ ನಾಟಕೀಯ ನಾಯಕರೆನ್ನಿಸಿಕೊಂಡವರನ್ನು ಪಕ್ಷದಿಂದ ಉಚ್ಚಾಟಿಸುವ ಕೆಲಸ ಮಾಡಬೇಕಾಗಿರುವುದು ಅತೀ ಅಗತ್ಯ

  • ಟಿ ಕೆ ಎಂ ಅಬ್ದುಲ್ ಅಮೀದ್, ಮಂಗಳೂರು