ಕೊಂಕಣಿ ಮಾನ್ಯತೋತ್ಸವ ಸಂಪನ್ನ , ಸಾಧಕರಿಗೆ ಸನ್ಮಾನ

ಕರಾವಳಿ ಅಲೆ  ವರದಿ

ದಾಂಡೇಲಿ : ಕಳೆದ 3 ದಿನಗಳಿಂದ ನಗರದ ರಂಗನಾಥ ಅಡಿಟೋರಿಯಂನಲ್ಲಿ ಜರುಗಿದ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25ರ ಸಮಾರೋಪ ಸಮಾರಂಭವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಹಾಗೂ ಮಾಜಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ಹಿರಿಂiÀiರಾದ ಬಸ್ತಿ ವಾಮನ್ ಶೆಣೈ ಮಾತನಾಡಿ, “ಕೊಂಕಣಿ ಭಾಷಿಕರು ಕೊಂಕಣಿ ಭಾಷೆಯನ್ನು ಮನೆಯಲ್ಲಿ ಸಂಕೊಚವಿಲ್ಲದೆ ಮಾತನಾಡಬೇಕು, ಯುವಕರು ಇಂಗ್ಲಿಷ್ ವ್ಯಾಮೋಹಕ್ಕಿಂತ ಕೊಂಕಣಿ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು” ಎಂದರು

ಕೊಂಕಣಿ ಭಾಷೆ ಸಾಹಿತ್ಯ ಮತ್ತು ಸಂಘಟನೆ ಕುರಿತು ಪ್ರಭಾ ವಿ ಭಟ್, ಸರಯೂ ಎಲ್ ಪ್ರಭು, ಉದಯ ರಾಯ್ಕರ್, ಉಷಾ ನಾಯಕ್ ತಮ್ಮ ವಿಚಾರ ಮಂಡಿಸಿ, “ಯುವಜನರು ಕೊಂಕಣಿ ಭಾಷೆಯ ಕಲಿಕೆಯ ಹಾಗೂ ಅಭಿವೃದ್ಧಿ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕು” ಎಂದರು. ಮಂಗಳೂರ ವಿಶ್ವವಿದ್ಯಾಲಯದ ಕೊಂಕಣಿ ಪೀಠದ ಸಂಯೋಜಕ ಜಯವಂತ ನಾಯ್ಕ ಮಾತನಾಡಿದರು. ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್ ಪಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಾಜ್ಯಾದಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಕೊಂಕಣಿ ಸಾಧಕರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್ ಪಿ ನಾಯ್ಕ ಹಾಗೂ ಪತ್ನಿ ಶ್ರೀಲಕ್ಷ್ಮೀಯವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಸದಸ್ಯರಾದ ಲಕ್ಷ್ಮಣ ಪ್ರಭು ಕುಂಬಳೆ, ಸಂತೋಷ ಶೆಣೈ, ದಯಾನಂದ್ ಪಾಂಡು ಗೌಡ, ಮಾಧವ ಶೇಟ್, ರಾಮಾ ವಿ ಮೇಸ್ತಾ, ದಾಮೋದರ್ ಭಂಡಾರಕರ್, ಸುಮಂಗಲ ಸದಾನಂದ ನಾಯಕ, ನಾಗೇಶ ಅಣ್ವೇಕರ್, ಮಾನ್ಯುವೆಲ್ ಸ್ಟೀಫನ್ ಎ ರೊಡ್ರಿಗಸ್ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್  ಬಿ ದೇವದಾಸ ಪೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕರಾವಳಿ ಅಲೆ  ವರದಿ

ದಾಂಡೇಲಿ : ಕಳೆದ 3 ದಿನಗಳಿಂದ ನಗರದ ರಂಗನಾಥ ಅಡಿಟೋರಿಯಂನಲ್ಲಿ ಜರುಗಿದ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25ರ ಸಮಾರೋಪ ಸಮಾರಂಭವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಹಾಗೂ ಮಾಜಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ಹಿರಿಂiÀiರಾದ ಬಸ್ತಿ ವಾಮನ್ ಶೆಣೈ ಮಾತನಾಡಿ, “ಕೊಂಕಣಿ ಭಾಷಿಕರು ಕೊಂಕಣಿ ಭಾಷೆಯನ್ನು ಮನೆಯಲ್ಲಿ ಸಂಕೊಚವಿಲ್ಲದೆ ಮಾತನಾಡಬೇಕು, ಯುವಕರು ಇಂಗ್ಲಿಷ್ ವ್ಯಾಮೋಹಕ್ಕಿಂತ ಕೊಂಕಣಿ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು” ಎಂದರು

ಕೊಂಕಣಿ ಭಾಷೆ ಸಾಹಿತ್ಯ ಮತ್ತು ಸಂಘಟನೆ ಕುರಿತು ಪ್ರಭಾ ವಿ ಭಟ್, ಸರಯೂ ಎಲ್ ಪ್ರಭು, ಉದಯ ರಾಯ್ಕರ್, ಉಷಾ ನಾಯಕ್ ತಮ್ಮ ವಿಚಾರ ಮಂಡಿಸಿ, “ಯುವಜನರು ಕೊಂಕಣಿ ಭಾಷೆಯ ಕಲಿಕೆಯ ಹಾಗೂ ಅಭಿವೃದ್ಧಿ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕು” ಎಂದರು. ಮಂಗಳೂರ ವಿಶ್ವವಿದ್ಯಾಲಯದ ಕೊಂಕಣಿ ಪೀಠದ ಸಂಯೋಜಕ ಜಯವಂತ ನಾಯ್ಕ ಮಾತನಾಡಿದರು. ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್ ಪಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಾಜ್ಯಾದಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಕೊಂಕಣಿ ಸಾಧಕರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್ ಪಿ ನಾಯ್ಕ ಹಾಗೂ ಪತ್ನಿ ಶ್ರೀಲಕ್ಷ್ಮೀಯವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಸದಸ್ಯರಾದ ಲಕ್ಷ್ಮಣ ಪ್ರಭು ಕುಂಬಳೆ, ಸಂತೋಷ ಶೆಣೈ, ದಯಾನಂದ್ ಪಾಂಡು ಗೌಡ, ಮಾಧವ ಶೇಟ್, ರಾಮಾ ವಿ ಮೇಸ್ತಾ, ದಾಮೋದರ್ ಭಂಡಾರಕರ್, ಸುಮಂಗಲ ಸದಾನಂದ ನಾಯಕ, ನಾಗೇಶ ಅಣ್ವೇಕರ್, ಮಾನ್ಯುವೆಲ್ ಸ್ಟೀಫನ್ ಎ ರೊಡ್ರಿಗಸ್ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್  ಬಿ ದೇವದಾಸ ಪೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY