ಕೊಲ್ಲಂಗಾನ -ಅರಂತೋಡು ಕಾಂಕ್ರಿಟೀಕೃತ ರಸ್ತೆಗೆ ಚಾಲನೆ

ಕಾಸರಗೋಡು : ಮಧೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲಂಗಾನ-ಅರಂತೋಡು (ಚರ್ಚ್ ಹಿಂಬದಿ ರಸ್ತೆ) ಕಾಂಕ್ರೀಟೀಕರಣ ರಸ್ತೆಗೆ ಗ್ರಾಮ ಪಂಚಾಯತಿ ಸದಸ್ಯೆ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ಪಂಚಾಯತಿಯ ವಾರ್ಡ್‍ಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು  ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ  ಜನರು ಸಹಕರಿಸಬೇಕೆಂದು ವಿನಂತಿಸಿದರು. ಸರಕಾರದಿಂದ ಲಭಿಸುವ ಎಲ್ಲಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಲು ಸರ್ವ ಪ್ರಯತ್ನ ಮಾಡುವುದಾಗಿ ಅವರು ಭವವಸೆ ನೀಡಿದರು.