ಸರಣಿ ಗೆಲುವಿನತ್ತ ಕೊಹ್ಲಿ ಪಡೆ ಚಿತ್ತ

  • ಎಸ್ ಜಗದೀಶ್ಚಂದ್ರ ಅಂಚನ್

.  ಜೋಹಾನ್ಸಬಗನಲ್ಲಿ ನಡೆದ ಪಿಂಕ್ ಡೇ ಮ್ಯಾಚನ್ನು ಗೆದ್ದಿರುವ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಇಂದು ನಡೆಯುವ ಪಂದ್ಯವನ್ನು ಕೂಡ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಆದರೆ  ಟೀಂ ಇಂಡಿಯಾ ಈ ಪಂದ್ಯದಲ್ಲಿ ಜಯ ಸಾಧಿಸಿಯೇ ಸಿದ್ದ ಎನ್ನುವ ಭರವಸೆಯನ್ನು ಹೊಂದಿದೆ. ಹಾಗಾಗಿ ಇಂದಿನ ಪಂದ್ಯ ಅತ್ಯಂತ ಪೈಪೆÇೀಟಿಯನ್ನು ಕಾಣಲಿದೆ.

ನಾಲ್ಕನೇ ಪಂದ್ಯದಲ್ಲಿ ರೋಚಕ ಸೋಲನ್ನು ಕಂಡರೂ ಅದಕ್ಕೆ ಕೆಲವು ಕಾರಣಗಳು ಇತ್ತು. ಒಂದು ಕಡೆ ಪದೇ ಪದೇ ಮಳೆ ಮತ್ತು ಬೆಳಕಿನ ಅಡಚಣೆಯಿಂದ ಪಂದ್ಯ ಟೀಂ ಇಂಡಿಯಾದ ಕೈ ತಪ್ಪುವಂತಾಯಿತು. ಈ ಗೆಲುವು ದಕ್ಷಿಣ ಆಫ್ರಿಕಾಕ್ಕೆ ಹೊಸ ಹುರುಪು ತಂದುಕೊಟ್ಟಿದೆ.

ಇಂದು ಪೆÇೀರ್ಟ್ ಎಲಿಜಬೆತ್ತನಲ್ಲಿ ನಡೆಯುವ ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ  ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈ ಮೈದಾನದಲ್ಲಿ ಈ ಮೊದಲು ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಎಂಎಸ್ ಧೋನಿ ಟೀಂ ಇಂಡಿಯಾವನ್ನು  ್ಲ ಮುನ್ನಡೆಸಿದ್ದು, ದುರದೃಷ್ಟಕರವೆಂದರೆ ಈ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಿಲ್ಲ. ಒಂದುವೇಳೆ ಈ ಪಂದ್ಯ ಗೆದ್ದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.

ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್  ದಕ್ಷಿಣ ಆಫ್ರಿಕಾ ತಂಡಕ್ಕೆ ಕಗ್ಗಂಟಾಗಿ ಪರಿಣಾಮಿಸಿದ್ದಾರೆ. ಆಡಿರುವ ನಾಲ್ಕು  ಪಂದ್ಯಗಳಲ್ಲಿ ಇವರಿಬ್ಬರೂ  300ಕ್ಕೂ ಹೆಚ್ಚು ರನ್ ಗಳಿಸಿರುವರು. ಉಳಿದ ಯಾರೂ ಸಮಯೋಚಿತ ಬ್ಯಾಟಿಂಗ್ ನಡೆಸಲು ವಿಫಲ. ಆದರೆ ಟೀಂ ಇಂಡಿಯಾದ ಬೌಲರುಗಳು ತಮ್ಮ ಕಾರ್ಯವನ್ನು ಸಾಂಘಿಕವಾಗಿ ನಿರ್ವಹಿಸಿದ್ದಾರೆ. ಇಂದಿನ ಪಂದ್ಯ ಉಭಯ ತಂಡಗಳಿಗೂ ನಿರ್ಣಯಕವಾಗಲಿದೆ.

LEAVE A REPLY