ಕೋಡಿಕಲ್ಲಿನಿಂದ ಕೆಪಿಟಿವರೆಗೆ ಹೆದ್ದಾರಿ ರಸ್ತೆ ಕೆಟ್ಟು ಹೋಗಿದೆ

ರಾಷ್ಟ್ರೀಯ ಹೆದ್ದಾರಿ 66 ಕೋಡಿಕಲ್ಲಿನಿಂದ ಕೆಪಿಟಿವರೆಗೆ ಹೆದ್ದಾರಿ ರಸ್ತೆ ಅಲ್ಲಲ್ಲಿ ಹೊಂಡ ಬಿದ್ದು ಡಾಮರು ಮಾಯವಾಗಿದೆ ರಸ್ತೆ ಇಷ್ಟೊಂದು ಕೆಟ್ಟು ಹೋಗಿದ್ದರೂ ಗುಂಡಿ ಬಿದ್ದಲ್ಲಿಗೆ ಕಾಟಾಚಾರಕ್ಕೆ ತೇಪೆ ಹಾಕುತ್ತಿದ್ದಾರೆಯೇ ಹೊರತು ಸಂಪೂರ್ಣ ರಸ್ತೆಗೆ ಡಾಮರು ಹಾಕುತ್ತಿಲ್ಲ ನಮ್ಮ ಸಂಸದ ನಳಿನ್ ಕಟೀಲ್ ಈ ಬಗ್ಗೆ ಚೂರು ನಿಗಾವಹಿಸಿದಂತೆ ಕಾಣುತ್ತಿಲ್ಲ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಅಲ್ಲಲ್ಲಿ ಎಕ್ಕುಟ್ಟಿ ಹೋಗಿದೆ ನಮ್ಮ ಸಂಸದರು ಪಾರ್ಲಿಮೆಂಟಿಗೆ ಹೋಗಿ ಏನು ಮಾಡುತ್ತಾರೆ ಇಲ್ಲಿನ ಹೆದ್ದಾರಿ ದುಃಸ್ಥಿತಿಯ ಬಗ್ಗೆ ಸಂಬಂಧಿಸಿದವರಲ್ಲಿ ತಿಳಿಸಲು ಏನಡ್ಡಿ ಕೋಡಿಕಲ್ ಕೊಟ್ಟಾರಚೌಕಿ ಕುಂಟಿಕಾನಕ್ಕೆ ಹೋಗುವಲ್ಲಿ ಹೆದ್ದಾರಿ ರಸ್ತೆ ಅಲ್ಲಲ್ಲಿ ದೋಸೆ ಕಾವಲಿಯಂತೆ ತೂತು ಬಿದ್ದಿದೆ ಸಂಸದರೇ ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ ಆದ್ದರಿಂದ ಕೂಡಲೇ ಅಲ್ಲಲ್ಲಿ ಎಕ್ಕುಟ್ಟಿ ಹೋದ ಹೆದ್ದಾರಿ ರಸ್ತೆಗಳಿಗೆ ಹೊಸತಾಗಿ ಡಾಮರೀಕರಣ ಮಾಡಿಸಿ

  • ಪ್ರತೀಕ್ ಶೆಟ್ಟಿ  ಕೋಡಿಕಲ್

LEAVE A REPLY