ಡಿ 10ಕ್ಕೆ ಕಿಸಾನ್ ಮೇಳ

ಸುದ್ದಿಗಾರರಲ್ಲಿ ಮಾತನಾಡುತ್ತಿರುವ ಡಾ ಪಿ ಚೌಡಪ್ಪ

ನಮ್ಮ ಪ್ರತಿನಿಧಿ ವರದಿ

 ಕಾಸರಗೋಡು : ಕೇಂದ್ರೀಯ  ತೋಟಗಾರಿಕಾ ಬೆಳೆ  ಸಂಶೋಧನಾ ಕೇಂದ್ರ (ಸಿಪಿಸಿಆರ್‍ಐ) ಶತಮಾನೋತ್ಸವದ ದಂಗವಾಗಿ ಡಿಸೆ0ಬರ್ ಹತ್ತರಂದು ಕಿಸಾನ್ ಮೇಳ ಆಯೋಜಿಸಿರುವುದಾಗಿ ಸಂಬಂಧಪಟ್ಟವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದರಲ್ಲಿ ತೆಂಗು ಸಂಶೋಧನೆ  ಮತ್ತು ಅಭಿವೃದ್ಧಿ ಕಾರ್ಯಾಗಾರ ಹಾಗೂ ಕಿಸಾನ್ ಮೇಳ ಜರುಗಲಿದೆ ಎಂದು ಸಿಪಿಸಿಆರ್‍ಐ  ನಿರ್ದೇಶಕ   ಡಾ ಪಿ ಚೌಡಪ್ಪ   ಸುದ್ದಿಗಾರರಿಗೆ ತಿಳಿಸಿದರು.

ಕಿಸಾನ್ ಮೇಳದಲ್ಲಿ  ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳುವರು.  ಡಿ 10ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು  ಕೇಂದ್ರ ಕೃಷಿ ಸಚಿವ  ರಾಧಾ ಮೋಹನ್ ಸಿಂಗ್  ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ  ಶತಮಾನೋತ್ಸವ ಕಟ್ಟಡ, ಶತಮಾನೋತ್ಸವ ಪಾರ್ಕ್  ಹಾಗೂ ಮಿಲ್ಲೇನಿಯಂ  ಅತಿಥಿಗ್ರಹ ಲೋಕಾರ್ಪಣೆಗೊಳ್ಳಲಿದೆ.

ಸಿಪಿಸಿಆರ್‍ಐ ಸಾಧನೆ ಕುರಿತ ಪುಸ್ತಕ ಕೂಡಾ ಬಿಡುಗಡೆಯಾಗಲಿದೆ. ಕಿಸಾನ್ ಮೇಳದಂಗವಾಗಿ ಡಿ 10ರಿಂದ 13ರ ತನಕ ರಾಷ್ಟ್ರ ಮಟ್ಟದ ಕೃಷಿ ವಸ್ತು ಪ್ರದರ್ಶನ, ಸಂವಾದ, ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,  ಪ್ರಗತಿಪರ ಕೃಷಿಕರು ವಿಜ್ಞಾನಿಗಳು, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅವರು ಹೇಳಿದರು