ಫಾತಿಮಾ ಜೊತೆ ಆಮೀರ್ ಕ್ಲೋಸ್ನೆಸ್, ಕಿರಣ್ ಅಪ್ಸೆಟ್

ಆಮೀರ್ ಖಾನ್ ತನ್ನ ಮನೋಜ್ಞ ನಟನೆಯಿಂದಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾನೆ ನೋ ಡೌಟ್. ಅವನ ಪತ್ನಿ ಕಿರಣ್ ರಾವ್ ಕೂಡಾ ಇಷ್ಟು ಸಮಯ ತನ್ನ ಪತಿಯ ಬಗ್ಗೆ ಭಾರೀ ಹೆಮ್ಮಯಿಂದಲೇ ಮಾತಾಡುತ್ತಿದ್ದಳು. ಆದರೆ ಕೆಲವು ಸಮಯದಿಂದ ಕಿರಣ್ ತುಂಬಾ ಅಪ್ಸೆಟ್ ಆಗಿದ್ದಾಳೆ. ಅದಕ್ಕೆ ಆಮೀರ್ `ದಂಗಲ್’ ಪುತ್ರಿ ಫಾತಿಮಾ ಸಾನಾ ಖಾನ್ ಜೊತೆಗಿನ ಕ್ಲೋಸ್ನೆಸ್ಸೇ ಕಾರಣ ಎಂದು ಸಿನಿ ವೆಬ್ ಸೈಟೊಂದು ವರದಿ ಮಾಡಿದೆ.

ಆಮೀರ್ ತನ್ನ ಮುಂದಿನ ಸಿನಿಮಾ `ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರಕ್ಕೂ ಫಾತಿಮಾಳೇ ಬೇಕೆಂದು ಫಿಲ್ಮ್ ಮೇಕರ್ ಆದಿತ್ಯಾ ಚೋಪ್ರಾ ಜೊತೆ ಒತ್ತಾಯಿಸಿ ಆಯ್ಕೆಮಾಡಿಕೊಂಡಿದ್ದಾನೆ. ಅದಲ್ಲದೇ `ದಂಗಲ್’ ಚಿತ್ರೀಕರಣ ಲಾಗಾಯ್ತಿನಿಂದಲೂ ಫಾತಿಮಾ ಜತೆ ಅಮೀರ್ ಒಡನಾಟ ಜೋರಾಗಿಯೇ ಇದೆ. ಚಿತ್ರ ಮುಗಿದರೂ ಇನ್ನೂ ಆಮೀರ್ ಅವಳ ಜೊತೆ ಪಾರ್ಟಿ ಮಾಡುತ್ತಿದ್ದಾನೆ ಜೊತೆಗೇ ಆಮೀರ್, ಫಾತಿಮಾ ಜೊತೆಯಾಗಿಯೇ ಜಿಮ್ಮಿನಲ್ಲಿ ವರ್ಕೌಟ್ ಮಾಡುತ್ತಿರುವುದು ಕಿರಣ್ ತಲೆಬಿಸಿಗೆ ಕಾರಣವಾಗಿದೆ. ಅದಲ್ಲದೇ ಫಾತಿಮಾ ಸಂದರ್ಶನವೊಂದರಲ್ಲಿ ಆಮೀರ್ ಪುತ್ರಿಗಿಂತ ಅವರ ಜೊತೆ ತೆರೆಯ ಮೇಲೆ ಲವರ್ ಆಗಿ ನಟಿಸಿದ್ದರೇ ಚೆನ್ನಾಗಿತ್ತು ಎಂದು ಹೇಳಿ ಅಚ್ಚರಿ ಹುಟ್ಟಿಸಿದ್ದಳು.

ಕಿರಣ್ ರಾವ್ ಅಮೀರನ ಎರಡನೇ ಪತ್ನಿ. `ಲಗಾನ್’ ಚಿತ್ರೀಕರಣದ ವೇಳೆ ಪರಿಚಯವಾಗಿದ್ದ ಅವರ ನಡುವೆ ಲವ್ ಶುರುವಾಗಿತ್ತು. ಮೊದಲ ಪತ್ನಿ ರೀನಾಳಿಂದ ಎರಡು ಮಕ್ಕಳನ್ನು ಪಡೆದಿರುವ ಆಮೀರ್ ನಂತರ ಆಕೆಗೆ ವಿಚ್ಛೇದನ ನೀಡಿ ಕಿರಣ್ ಮದುವೆಯಾಗಿ ಈಗ ಒಬ್ಬ ಮಗನೂ ಅವರಿಗೆ ಇದ್ದಾರೆ. ಈಗ ಆಮೀರ್-ಫಾತಿಮಾ ಒಡನಾಟ ಕಿರಣ್ ನಿದ್ದೆಕೆಡಿಸಲು ಕಾರಣವಾಗಿದ್ದು ಇದರಿಂದಾಗಿ ಆಕೆ ಪತಿ ಜೊತೆ ಜಗಳ ಕೂಡಾ ಆಡಿದ್ದಾಳೆ ಎನ್ನುವ ರೂಮರ್ ಕೂಡಾ ಇದೆ.